ಧರ್ಮೇಂದ್ರ ಆಸ್ತಿಪಾಸ್ತಿ ಎಷ್ಟಿದೆ ಗೊತ್ತಾ?

24 Nov 2025

Pic credit: PTI

By: Vijayasarathy

ಬಾಲಿವುಡ್​ನ ಹೀಮ್ಯಾನ್ ಎಂದೇ ಖ್ಯಾತರಾದ ನಟ ಧರ್ಮೇಂದ್ರ 89ರ ಇಳಿವಯಸ್ಸಲ್ಲಿ 2025ರ ನ. 24, ಸೋಮವಾರದಂದು ಮುಂಬೈನಲ್ಲಿನ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಧರ್ಮೇಂದ್ರ ದೇಹಾಂತ್ಯ

Pic credit: PTI

ಧರ್ಮೇಂದ್ರರಿಗೆ ಇಬ್ಬರು ಪತ್ನಿಯರು ಪ್ರಕಾಶ್ ಕೌರ್, ಹೇಮಮಾಲಿನಿ. ಸನ್ನಿ, ದೇವಲ್, ಬಾಬಿ ದೇವಲ್, ವಿಜೇತಾ, ಅಜೇತಾ, ಇಶಾ ದೇವಲ್, ಆಹಾನಾ ದೇವಲ್ ಮಕ್ಕಳು.

ಧರ್ಮೇಂದ್ರ ಕುಟುಂಬ

Pic credit: PTI

ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದ ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ ಸಿನಿಮಾಗಳಲ್ಲಿ ಮಾತ್ರವಲ್ಲ, ಹೂಡಿಕೆ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಬ್ಯುಸಿನೆಸ್​ಮ್ಯಾನ್

Pic credit: PTI

300ಕ್ಕೂ ಹೆಚ್ಚು ಸಿನಿಮಾಗಳು, ಹಲವು ಬ್ಯುಸಿನೆಸ್​ಗಳು, ಹೂಡಿಕೆಗಳಿಂದ ಆದಾಯ ಗಳಿಸಿರುವ ಇವರ ನಿವ್ವಳ ಆಸ್ತಿಮೌಲ್ಯ 400 ಕೋಟಿ ರೂಗೂ ಅಧಿಕ ಎನ್ನಲಾಗಿದೆ.

ಕೋಟ್ಯಾಧೀಶ್ವರ

Pic credit: PTI

ನಟ ಧರ್ಮೇಂದ್ರ ಅವರು ಗರಂ ಧರಂ ಬ್ರ್ಯಾಂಡ್ ಅಡಿಯಲ್ಲಿ ರೆಸ್ಟೋರೆಂಟ್ ಚೈನ್ ನಡೆಸಿದ್ದಾರೆ. ಮುಂಬೈನಲ್ಲಿ ಹೀಮ್ಯಾನ್ ರೆಸ್ಟೋರೆಂಟ್ ಕೂಡ ಆರಂಭಿಸಿದ್ದರು.

ರೆಸ್ಟೋರೆಂಟ್​ಗಳು

Pic credit: PTI

ಧರ್ಮೇಂದ್ರ ಅವರು ವಿಜೇತಾ ಫಿಲಂಸ್ ಮತ್ತು ದೇವಲ್ ಫಿಲಂಸ್ ಎನ್ನುವ ಪ್ರೊಡಕ್ಷನ್ ಕಂಪನಿಗಳನ್ನು ಹೊಂದಿದ್ದರು. ಘಾಯಲ್, ಬರ್ಸಾತ್ ಸೇರಿ ಹಲವು ಹಿಟ್ ಸಿನಿಮಾಗಳು ಬಂದಿವೆ.

ಪ್ರೊಡಕ್ಷನ್ ಹೌಸ್

Pic credit: PTI

ನಟ ಧರ್ಮೇಂದ್ರ ಅವರು ಮಹಾರಾಷ್ಟ್ರದಲ್ಲಿ ಹಲವು ಆಸ್ತಿಪಾಸ್ತಿ ಹೊಂದಿದ್ದಾರೆ. ಲೋನಾವಾಲದಲ್ಲಿ 100 ಎಕರೆ ಫಾರ್ಮ್​ಹೌಸ್, ಮುಂಬೈನಲ್ಲಿ ಹಲವು ಅಪಾರ್ಟ್ಮೆಂಟ್, ಕಮರ್ಷಿಯಲ್ ಪ್ರಾಪರ್ಟಿ ಹೊಂದಿದ್ದಾರೆ.

ರಿಯಲ್ ಎಸ್ಟೇಟ್ ಆಸ್ತಿ

Pic credit: PTI

ಧರ್ಮೇಂದ್ರ ಕಾರುಪ್ರಿಯರಾಗಿದ್ದರು. ಫಿಯಟ್​ನಂತಹ ಹಳೆಯ ಮಾಡಲ್​ನಿಂದ ಹಿಡಿದು ರೇಂಜ್ ರೋವರ್ ಇವೋಕ್​ನಂತಹ ಲಕ್ಷುರಿ ಕಾರ್​ಗಳವರೆಗೆ ಸಾಕಷ್ಟು ಕಾರ್ ಕಲೆಕ್ಷನ್ ಹೊಂದಿದ್ದರು.

ಕಾರುಗಳ ಕ್ರೇಜ್

Pic credit: PTI