ಕುಟುಂಬದ ಭದ್ರತೆಗೆ ತಪ್ಪದೇ ಈ ಕೆಲಸ ಮಾಡಿ

11 Nov 2025

Pic: Unsplash

By: Vijayasarathy

ಕುಟುಂಬಕ್ಕೆ ಗತಿ?

ನೀವು ಸಾಕಷ್ಟು ಹಣ ಗಳಿಸುತ್ತಿದ್ದೀರಿ. ನೀವಿರುವವರೆಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತದೆ. ಆದರೆ, ನಿಮಗೇನಾದರೂ ಅಕಾಲಿಕ ಮರಣವಾದರೆ ಕುಟುಂಬದ ಗತಿಯೇನು?

Pic: Unsplash

ಮುಂಜಾಗ್ರತೆ ಕ್ರಮ

ನಿಮ್ಮ ನಂತರ ಕುಟುಂಬವು ಹಣಕಾಸು ಸಂಕಷ್ಟಕ್ಕೆ ಸಿಲುಕಬಾರದು ಎಂದಿದ್ದರೆ ನೀವು ಬದುಕಿರುವಾಗಲೇ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

Pic: Unsplash

ಹಣದ ಬಗ್ಗೆ ಮಾತಾಡಿ

ನಿಮ್ಮ ಆದಾಯ, ವೆಚ್ಚ, ಹೂಡಿಕೆ, ಗುರಿ ಇತ್ಯಾದಿ ಬಗ್ಗೆ ಕುಟುಂಬದ ಎಲ್ಲಾ ಸದಸ್ಯರಿಗೂ ಗೊತ್ತಿರಬೇಕು, ಹಾಗೆ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡುತ್ತಿರಬೇಕು.

Pic: Unsplash

ಹಣದ ಅರಿವು

ಹಣ ಗಳಿಕೆ, ಹಣ ಉಳಿಕೆ, ಹಣ ಹೂಡಿಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿಸಿ. ಕಷ್ಟದ ಸಂದರ್ಭದಲ್ಲಿ ಹಣ ಹೇಗೆ ನಿಭಾಯಿಸಬೇಕು ಎನ್ನವುದು ಎಲ್ಲರಿಗೂ ಗೊತ್ತಿರಬೇಕು.

Pic: Unsplash

ದಾಖಲೆಗಳು ಒಂದೆಡೆ

ನಿಮ್ಮ ಎಲ್ಲಾ ಹಣಕಾಸು ಮತ್ತು ಕಾನೂನು ದಾಖಲೆಗಳು ಒಂದೇ ಜಾಗದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ನಂಬುವ ಒಂದಿಬ್ಬರಿಗಾದರೂ ಇದರ ಮಾಹಿತಿ ಇರಲಿ.

Pic: Unsplash

ಕುಟುಂಬದವರಿಗೆ ತಿಳಿದಿರಲಿ

ಬ್ಯಾಂಕ್ ಅಕೌಂಟ್, ಡೀಮ್ಯಾಟ್ ಅಕೌಂಟ್, ಸಾಲ, ಇಎಂಐ, ಇನ್ಷೂರೆನ್ಸ್, ಆಸ್ತಿಪತ್ರ ಇತ್ಯಾದಿ ದಾಖಲೆಗಳು, ಸಿಎ, ಲಾಯರ್ ಸಂಪರ್ಕ ವಿವರ ಎಲ್ಲರಿಗೂ ಗೊತ್ತಿರಲಿ.

Pic: Unsplash

ಹಣಕಾಸು ಭದ್ರತೆ

ನಿಮ್ಮ ಕುಟುಂಬಕ್ಕೆ ಕಡ್ಡಾಯವಾಗಿ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಇರಲಿ. ನಿಮ್ಮ ವಾರ್ಷಿಕ ಆದಾಯದ 10 ಪಟ್ಟು ಹಣದಷ್ಟಾದರೂ ವಿಮೆ ಇರಲಿ.

Pic: Unsplash

ನಾಮಿನಿ ಮಾಡಿಸಿ

ಬ್ಯಾಂಕ್ ಅಕೌಂಟ್, ಇನ್ವೆಸ್ಟ್​ಮೆಂಟ್, ಇನ್ಷೂರೆನ್ಸ್ ಇತ್ಯಾದಿ ಯಾವುದನ್ನೇ ಆರಂಭಿಸಿದ್ದರೂ ಅದಕ್ಕೆ ನಾಮಿನಿಗಳನ್ನು ಸೇರಿಸುವುದನ್ನು ಮರೆಯಬೇಡಿ. ಇಲ್ಲದಿದ್ದರೆ ನಿಮ್ಮ ಗಳಿಕೆ ವ್ಯರ್ಥವಾದೀತು.

Pic: Unsplash