ತುಳುನಾಡು ಮತ್ತು ಬಂದರು ನಾಡೆನಿಸಿದ ದಕ್ಷಿಣಕನ್ನಡ ಜಿಲ್ಲೆಯ ಜಿಡಿಪಿ ತಲಾದಾಯ 6.69 ಲಕ್ಷ ಇದೆ. ಮುಂಬೈ ನಗರವನ್ನೂ ಇದು ಮೀರಿಸಿದೆ.
Pic credit: Google
7. ಸಿಕ್ಕಿಂ
ಈಶಾನ್ಯ ಭಾರತದಲ್ಲಿರುವ ಸಿಕ್ಕಿಂನ ಜಿಡಿಪಿ ತಲಾದಾಯ 7 ಲಕ್ಷ ರೂ ಆಸುಪಾಸಿನಲ್ಲಿದೆ. ನೈಸರ್ಗಿಕ ಸಂಪತ್ತಿನ ಜೊತೆಗೆ ಪ್ರವಾಸೋದ್ಯಮವೂ ಇದರ ಶ್ರೀಮಂತಿಕೆ ಹೆಚ್ಚಿಸಿದೆ.
Pic credit: Google
6. ಗೋವಾ
ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲೆಗಳ ಜಿಡಿಪಿ ತಲಾದಾಯ 7.63 ಲಕ್ಷ ರೂ ಇದೆ. ಇಲ್ಲಿಯೂ ಕೂಡ ಪ್ರವಾಸೋದ್ಯಮವು ಆರ್ಥಿಕತೆಯ ಬೆನ್ನೆಲುಬಾಗಿದೆ.
Pic credit: Google
5. ಸೋಲನ್, ಹಿ.ಪ್ರ.
ಹಿಮಾಲಯದ ಬಗುಲಲ್ಲೇ ಇರುವ ಹಿಮಾಚಲಪ್ರದೇಶದ ಸೋಲನ್ ಜಿಲ್ಲೆ 8.10 ಲಕ್ಷ ರೂ ಜಿಡಿಪಿ ತಲಾದಾಯ ಹೊಂದಿದೆ. ವಿವಿಧ ಉದ್ದಿಮೆಗಳ ಜೊತೆಗೆ ಪ್ರಬಲ ಪ್ರವಾಸೋದ್ಯಮ ಇದೆ.
Pic credit: Google
4. ನೋಯ್ಡಾ
ದೆಹಲಿಗೆ ಸಮೀಪ ಇರುವ, ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ ಗೌತಮಬುದ್ಧ ನಗರದಲ್ಲಿ (ನೋಯ್ಡಾ) ಬಹಳಷ್ಟು ಉದ್ಯಮಗಳಿವೆ. ಇದರ ಜಿಡಿಪಿ ತಲಾದಾಯ 8.48 ಲಕ್ಷ ರೂ.
Pic credit: Google
3. ಬೆಂಗಳೂರು
ಭಾರತದ ಸಿಲಿಕಾನ್ ಸಿಟಿ, ಉದ್ಯಾನನಗರಿ ಇತ್ಯಾದಿ ಹಲವು ವಿಶೇಷತೆಗಳಿಂದ ಕರೆಸಿಕೊಳ್ಳುವ ಬೆಂಗಳೂರು ನಗರದಲ್ಲಿ ಜಿಡಿಪಿ ತಲಾದಾಯ 8.93 ಲಕ್ಷ ರೂ. ಭಾರತದ 3ನೇ ಅತಿಶ್ರೀಮಂತ ಜಿಲ್ಲೆ.
Pic credit: Google
2. ಗುರುಗ್ರಾಮ್
ನೋಯ್ಡಾದಂತೆ ಗುರುಗ್ರಾಮ್ ಕೂಡ ದೆಹಲಿಗೆ ಸಮೀಪ ಇದೆ. ಹೀಗಾಗಿ ಬಹಳಷ್ಟು ಉದ್ಯಮಗಳು ಇಲ್ಲಿವೆ. ಹರ್ಯಾಣ ರಾಜ್ಯಕ್ಕೆ ಸೇರಿದ ಈ ಜಿಲ್ಲೆಯ ಜಿಡಿಪಿ ತಲಾದಾಯ 9.05 ಲಕ್ಷ ರೂ ಇದೆ.
Pic credit: Google
1. ರಂಗಾರೆಡ್ಡಿ ಜಿಲ್ಲೆ
ಹೈದರಾಬಾದ್ಗೆ ಪಕ್ಕದ ರಂಗಾರೆಡ್ಡಿ ಜಿಲ್ಲೆಯ ಜಿಡಿಪಿ ತಲಾದಾಯ 11.46 ಲಕ್ಷ ರೂ. ಐಟಿ ಬಿಟಿ, ಫಾರ್ಮಾ, ಟೆಕ್ ಪಾರ್ಕ್ಗಳು ಇಲ್ಲಿ ಹೇರಳ ಇವೆ. ಭಾರತದ ನಂ. 1 ಶ್ರೀಮಂತ ಜಿಲ್ಲೆ ಎನಿಸಿದೆ.