ಹಣವಂತರಾಗಲು ಏರಬೇಕಾದ 7 ಮೆಟ್ಟಿಲುಗಳು
27 Oct 2025
Pic credit: Google
By: Vijayasarathy
ಮೊದಲ ಹಂತದಲ್ಲಿ ಸಾಲ ಇರುತ್ತೆ. ಎಮರ್ಜೆನ್ಸಿ ಫಂಡ್ ಇರಲ್ಲ. ಪ್ರತೀ ತಿಂಗಳೂ ಹಣ ನಿರ್ವಹಣೆಗೆ ಪರದಾಟದ ಸ್ಥಿತಿ.
ಲೆವೆಲ್ 1
Pic credit: Google
ಎರಡನೇ ಹಂತದಲ್ಲಿ ಸಾಲ ಇರಲ್ಲ. ಆದರೆ, ಹಣ ಅಷ್ಟಕಷ್ಟೇ. ಅನಿರೀಕ್ಷಿತ ವೆಚ್ಚ ಬಂದರೆ ಅದೇ ಅಕೌಂಟ್ ಖಾಲಿ ಖಾಲಿ.
ಲೆವೆಲ್ 2
Pic credit: Google
ಆರು ತಿಂಗಳ ಎಮರ್ಜೆನ್ಸಿ ಫಂಡ್ ನಿರ್ಮಿಸುತ್ತೀರಿ. ಉದ್ಯೋಗ ನಷ್ಟವಾದರೂ ಜೀವನ ನಿರ್ವಹಣೆ ಸಾಧ್ಯ. ಇದು ಮೂರನೇ ಹಂತದ ಸ್ಥಿತಿ.
ಲೆವೆಲ್ 3
Pic credit: Google
ನಿಮ್ಮ ಮೊದಲ ಆಸ್ತಿ ಗಳಿಸಿರುತ್ತೀರಿ. ಅಥವಾ ಕೋಟಿ ರೂಗಿಂತ ಹೆಚ್ಚು ಹಣವನ್ನು ಉತ್ತಮ ಕಡೆ ಹೂಡಿಕೆ ಮಾಡಿರುತ್ತೀರಿ. ಇದು 4ನೇ ಹಂತ.
ಲೆವೆಲ್ 4
Pic credit: Google
ಹಣಕಾಸು ಸ್ವಾವಲಂಬನೆಯ ಹಾದಿಗೆ (FIRE) ಹೋಗುವುದೇ 5ನೇ ಹಂತ. ಸಕ್ರಿಯವಾಗಿ ಹೂಡಿಕೆ ಮಾಡದಷ್ಟು ಮಟ್ಟಕ್ಕೆ ಈಗಿರುವ ಹೂಡಿಕೆಗಳು ಬೆಳೆದಿರುತ್ತವೆ.
ಲೆವೆಲ್ 5
Pic credit: Google
ಪೂರ್ತಿ ಹಣಕಾಸು ಸ್ವಾತಂತ್ರ್ಯ ಗಳಿಸುತ್ತೀರಿ. ಕೆಲಸ ಮಾಡಬೇಕಾದ ಅವಶ್ಯಕತೆಯೇ ಇರದಷ್ಟು ಆದಾಯವು ನಿಮ್ಮ ಹೂಡಿಕೆಗಳಿಂದ ಬರುತ್ತಿರುತ್ತದೆ. ಇದು 6ನೇ ಹಂತ.
ಲೆವೆಲ್ 6
Pic credit: Google
ಶ್ರೀಮಂತರ ಹಂತವೇ ಏಳನೆಯದು. ನಿಮ್ಮ ಸಂಪತ್ತೇ ನಿಮಗಾಗಿ ಕೆಲಸ ಮಾಡಲು ಆರಂಭಿಸುತ್ತದೆ. ನಿಮ್ಮನ್ನು ತಡೆಯುವವರೇ ಇಲ್ಲವಾಗಿರುವ ಸ್ಥಿತಿ.
ಲೆವೆಲ್ 7
Pic credit: Google
ಹೆಚ್ಚಿನ ಜನರು 2ನೇ ಹಂತ ದಾಟಲಾಗದೇ ಪರದಾಡುತ್ತಿರುತ್ತಾರೆ. ಎಮರ್ಜೆನ್ಸಿ ಫಂಡ್ ನಿರ್ಮಿಸಿ ಈ ಹಂತ ದಾಟುವುದೇ ಜಾಣತನ.
ಜಾಣರಾಗಿ...
Pic credit: Google
ಚಿನ್ನದ ಬಗ್ಗೆ ಬಾಬಾ ವಾಂಗಾ ಭವಿಷ್ಯ
ಬ್ಯಾಂಕ್ ಅಕೌಂಟ್: ಐಟಿ ಗಮನಿಸುವ ಸಂಗತಿಗಳು
ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕಾರ ಯಾಕೆ?