14 Nov 2025

ಮಕ್ಕಳಿಗೆ  ಹಣದ ಅರಿವು; ಇವನ್ನು ಕಲಿಸಿ...

Pic credit: Google

By: Vijayasarathy

ಹಣ ಗಳಿಸಬೇಕು

Pic credit: Google

ಕೆಲಸ ಮಾಡಿ ಹಣ ಗಳಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿ. ಮನೆಗೆಲಸ ಮಾಡಿಸಿ ಇಂತಿಷ್ಟು ಹಣ ಕೊಡುವ ಅಭ್ಯಾಸ ಮಾಡಿ. ಇದರಿಂದ ಶ್ರಮದ ಬೆಲೆ ತಿಳಿಯುತ್ತದೆ.

ಹಣ ಉಳಿಸಬೇಕು

Pic credit: Google

ಹಣ ಉಳಿಸುವುದು ಎಷ್ಟು ಮಹತ್ವ ಎಂಬುದು ಚಿಕ್ಕಂದಿನಲ್ಲೇ ತಿಳಿಯುವುದು ಒಳ್ಳೆಯದು. ಪಡೆದ ಹಣದಲ್ಲಿ ಸ್ವಲ್ಪವಾದರೂ ಉಳಿಸಿ ಕೂಡಿಡುವುದನ್ನು ಕಲಿಸಿ.

ವೆಚ್ಚದ ಪ್ರಾಮುಖ್ಯತೆ

Pic credit: Google

ವೆಚ್ಚದಲ್ಲಿ ಅಗತ್ಯ ಯಾವುದು, ಬಯಕೆ ಯಾವುದು ಈ ವ್ಯತ್ಯಾಸ ಮಕ್ಕಳಿಗೆ ತಿಳಿಯಬೇಕು. ಆಟಿಕೆ, ಚಾಕೊಲೆಟ್ ಮುಂತಾದವು ಅವಶ್ಯಕತೆ ಅಲ್ಲ ಎಂದು ತಿಳಿಸಬೇಕು.

ದಾನದ ಮಹತ್ವ

Pic credit: Google

ಹಣವಂತರಾದಾಗ ಹೃದಯವಂತರೂ ಆಗಬೇಕು. ಮಕ್ಕಳು ತಮಗೆ ಸಿಗುವ ಹಣದಲ್ಲಿ ಒಂದಷ್ಟು ಭಾಗವನ್ನು ಯಾರಿಗಾದರೂ ಅಗತ್ಯ ಇದ್ದವರಿಗೆ ಕೊಡುವಂತಹ ಬುದ್ಧಿ ಕಲಿಸಿ.

ಬ್ಯಾಂಕ್​ಗಳ ಕಾರ್ಯ

Pic credit: Google

ಹಣಕಾಸು ಪ್ರಪಂಚ ಹೇಗೆ ಕೆಲಸ ಮಾಡುತ್ತೆ ಎಂಬುದು ಮಕ್ಕಳಿಗೆ ತಿಳಿಯಬೇಕು. ಬ್ಯಾಂಕ್ ಅಕೌಂಟ್, ಡೆಪಾಸಿಟ್, ಎಟಿಎಂ ಇತ್ಯಾದಿ ನಿರ್ವಹಿಸುವುದು ಹೇಗೆಂದು ಗೊತ್ತಾಗಬೇಕು.

ಹೂಡಿಕೆ ಕಲಿಸಿ

Pic credit: Google

ಉಳಿಸಿದ ಹಣವನ್ನು ಹೂಡಿಕೆ ಯಾಕೆ ಮಾಡಬೇಕು? ಅದರಿಂದ ಏನು ಲಾಭ ಇತ್ಯಾದಿ ಸಂಗತಿಯನ್ನು ಮಕ್ಕಳಿಗೆ ತಿಳಿಸಬೇಕು, ಅವರಿಂದಲೂ ಮಾಡಿಸಬೇಕು.

ವಸ್ತುವಿನ ಮೌಲ್ಯ

Pic credit: Google

ಮಕ್ಕಳಿಗೆ ತಾವು ಖರೀದಿಸುವ ವಸ್ತುವಿನ ಬೆಲೆ, ಗುಣಮಟ್ಟ ಮತ್ತು ಪ್ರಮಾಣ ಏನು ಎಂಬುದು ತಿಳಿಯಬೇಕು. ಪ್ರತೀ ವಸ್ತು ಖರೀದಿಸಿದಾಗ ಈ ವ್ಯತ್ಯಾಸ ಮಕ್ಕಳು ತಿಳಿಯಬೇಕು.

ಸಂಯಮ ಬೆಳೆಸಿ

Pic credit: Google

ಹಣದ ವಿಚಾರದಲ್ಲಿ ಸಂಯಮ ಅಗತ್ಯ. 1,000 ರೂ ಬೆಲೆಯ ಆಟಿಕೆ ಬಯಸಿದಾಗ, ಪ್ರತೀ ವಾರ ಇಂತಿಷ್ಟು ಹಣ ಎತ್ತಿಡಿಸಿ, ನಂತರ ಖರೀದಿಸುವಂತೆ ಮಾಡಿ.