ಲಕ್ಷ ರು ಸಮೀಪಿಸಿದ ಚಿನ್ನದ ಬೆಲೆ
21 April 2025
Pic: Getty images
By: Vijayasarathy
ಭಾರೀ ಏರಿಕೆ
ಚಿನ್ನದ ಬೆಲೆ ಎಗ್ಗಿಲ್ಲದೆ ಹೆಚ್ಚುತ್ತಿದೆ. ಸೋಮವಾರ (ಏ. 21) ಮಧ್ಯಾಹ್ನದ ಹೊತ್ತಿಗೆ ದಾಖಲೆ ಬೆಲೆ ಪಡೆದಿದೆ ಚಿನ್ನ.
Pic: Getty images
ಲಕ್ಷ ರೂ ಸಮೀಪ
ಆಲ್ ಇಂಡಿಯಾ ಸರಾಫ ಅಸೋಸಿಯೇಶನ್ ಪ್ರಕಾರ 99.9 ಶುದ್ಧತೆಯ 10 ಗ್ರಾಮ್ ಅಪರಂಜಿ ಚಿನ್ನದ ಬೆಲೆ ಒಂದು ಲಕ್ಷ ರು ಸಮೀಪಕ್ಕೆ ಏರಿದೆ.
Pic: Getty images
ಬೆಂಗಳೂರಲ್ಲಿ ದಾಖಲೆ
ಬೆಂಗಳೂರಿನಲ್ಲಿ 10 ಗ್ರಾಮ್ನ ಶುದ್ಧ ಚಿನ್ನದ ಬೆಲೆ 99,845 ರೂ ಇದೆ. ಭಾರತದಲ್ಲೇ ಇರುವ ಗರಿಷ್ಠ ಚಿನ್ನದ ಬೆಲೆ ಇದು.
Pic: Getty images
ವಿವಿಧೆಡೆ ಇಷ್ಟಿದೆ...
ಭಾರತದ ವಿವಿಧೆಡೆ ಇಂದು ಏಪ್ರಿಲ್ 21, ಸೋಮವಾರ ಅಪರಂಜಿ ಚಿನ್ನದ ಬೆಲೆ 99,235 ರೂನಿಂದ 99,845 ರೂವರೆಗೂ ಇದೆ.
Pic: Getty images
ಬೆಲೆ ಏರಿಕೆಗೆ ಕಾರಣ
ಅನಿಶ್ಚಿತ ಸುಂಕ ಸ್ಥಿತಿ, ಜಾಗತಿಕ ರಾಜಕೀಯ ಬಿಕ್ಕಟ್ಟು, ಬಡ್ಡಿದರ ಕಡಿತ, ಡಾಲರ್ ದುರ್ಬಲ ಇತ್ಯಾದಿ ಅಂಶಗಳು ಚಿನ್ನದ ಬೆಲೆ ಏರಿಕೆಗೆ ಕಾರಣ.
Pic: Getty images
ಶೇ. 25 ಏರಿಕೆ
ಈ ವರ್ಷ (2025) ಮೂರ್ನಾಲ್ಕು ತಿಂಗಳಲ್ಲೇ ಚಿನ್ನದ ಬೆಲೆ ಶೇ. 25ರಷ್ಟು ಏರಿದೆ. ಅನಿಶ್ಚಿತ ವಾತಾವರಣ ತಿಳಿಗೊಂಡರೆ ಬೆಲೆ ಇಳಿಕೆ ಆಗಬಹುದು.
Pic: Getty images
ಬೆಳ್ಳಿ ಸಾಧಾರಣ
ಇನ್ನೊಂದೆಡೆ, ಚಿನ್ನದ ಬೆಲೆ ರೀತಿ ಬೆಳ್ಳಿ ತೀರಾ ಹೆಚ್ಚಿನ ಬೇಡಿಕೆ ಪಡೆದಿಲ್ಲ. ತನ್ನ ಗರಿಷ್ಠ ಮಟ್ಟದಿಂದ ಬೆಳ್ಳಿ ಬೆಲೆ ಇನ್ನೂ ಕೆಳಗೇ ಇದೆ.
Pic: Getty images
ಬೆಳ್ಳಿ ಬೆಲೆ
ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ ಗ್ರಾಮ್ಗೆ 101 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 111 ರೂ ಇದೆ.
Pic: Getty images
ವಿದೇಶದಲ್ಲಿ ಇಪಿಎಫ್ ಪಡೆಯೋದು ಹೇಗೆ?
ಗೋಲ್ಡ್ ಲೋನ್: RBI ಮಾರ್ಗಸೂಚಿ
ಕ್ಯಾಷ್ ಮಿತಿ ಮೀರಿದರೆ ದಂಡ