ಸಣ್ಣ ಪ್ರಮಾಣದ ಯುಪಿಐ ಪಾವತಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ ಜಾರಿಗೊಳಿಸುತ್ತಿದೆ.
ಇನ್ಸೆಂಟಿವ್ ಸ್ಕೀಮ್
Pic credit: Google
ಸರ್ಕಾರದ ಈ ಯೋಜನೆ 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆ ಅನ್ವಯ ಆಗುತ್ತದೆ. ಈ ಅವಧಿಯಲ್ಲಿ ಆದ ಮತ್ತು ಆಗುವ ಪಾವತಿಗಳಿಗೆ ಇನ್ಸೆಂಟಿವ್ ಸಿಗುತ್ತದೆ.
ಏಪ್ರಿಲ್ 1ರಿಂದ
Pic credit: Google
ಹಿಂದಿನ ಸ್ಲೈಡ್ನಲ್ಲಿ ತಿಳಿಸಲಾದಂತೆ ಆ ಅವಧಿಯಲ್ಲಿ ಗ್ರಾಹಕರು ಸಣ್ಣ ವರ್ತಕರು ಅಥವಾ ವ್ಯಾಪಾರಿಗಳಿಗೆ 2,000 ರೂವರೆಗಿನ ಹಣ ಪಾವತಿಗೆ ಇನ್ಸೆಂಟಿವ್ ಕೊಡಲಾಗುತ್ತದೆ.
2,000 ರೂ ಪಾವತಿ
Pic credit: Google
ಗ್ರಾಹಕರು 2,000 ರೂ ಒಳಗಿನ ಯಾವುದೇ ಮೊತ್ತವನ್ನು ಯುಪಿಐ ಮೂಲಕ ಪಾವತಿಸಿದರೆ ವ್ಯಾಪಾರಿಗಳಿಗೆ ಸಿಗುವ ಇನ್ಸೆಂಟಿವ್ ಶೇ. 0.15ರಷ್ಟು.
ಶೇ. 0.15 ಕಮಿಷನ್
Pic credit: Google
ಒಂದು ನಿದರ್ಶನ ನೀಡುವುದಾದಲ್ಲಿ, ಒಬ್ಬ ಗ್ರಾಹಕ ಅಂಗಡಿಗೆ ಹೋಗಿ 600 ರೂನಷ್ಟು ಸಾಮಾನು ಪಡೆದು ಹಣ ಪಾವತಿಸಿದರೆ, ಆಗ ಆ ವ್ಯಾಪಾರಿಗೆ 90 ಪೈಸೆ ಇನ್ಸೆಂಟಿವ್ ಸಿಗುತ್ತದೆ.
ಉದಾಹರಣೆ ನೋಡಿ
Pic credit: Google
ಈ ಇನ್ಸೆಂಟಿವ್ ಸಣ್ಣ ವ್ಯಾಪಾರಿಗಳಿಗೆ ಮಾತ್ರವೇ ಸಿಗುವುದು. ಫೋನ್ ಪೆ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಯಾವುದೇ ಯುಪಿಐ ಪ್ಲಾಟ್ಫಾರ್ಮ್ ಮೂಲಕವಾದರೂ ಪಾವತಿಸಬಹುದು.
ಯುವುದೇ ಯುಪಿಐ
Pic credit: Google
ಕಳೆದ ವರ್ಷದ ಏಪ್ರಿಲ್ 1ರಿಂದ ನಡೆದಿರುವ ವಹಿವಾಟುಗಳನ್ನು ಗಣಿಸಿ, ಆ ಪಾವತಿಗಳ ಮೊತ್ತಕ್ಕೆ ಅನುಸಾರ ಬ್ಯಾಂಕುಗಳಿಗೆ ಸರಕಾರ ಇನ್ಸೆಂಟಿವ್ ನೀಡುತ್ತದೆ. ಈ ಬ್ಯಾಂಕುಗಳ ಅದನ್ನು ಸಣ್ಣ ವರ್ತಕರಿಗೆ ವರ್ಗಾಯಿಸಬಹುದು.
ಯಾರು ಕೊಡುತ್ತಾರೆ?
Pic credit: Google
ಈ ಹಣಕಾಸು ವರ್ಷಾಂತ್ಯಕ್ಕೆ 200 ಬಿಲಿಯನ್ ಡಾಲರ್ ಯುಪಿಐ ವಹಿವಾಟುಗಳು ಆಗುವ ಗುರಿ ಸಾಧನೆ ನಿಟ್ಟಿನಲ್ಲಿ ಈ ಇನ್ಸೆಂಟಿವ್ ಕ್ರಮ ತೆಗೆದುಕೊಳ್ಳಲಾಗಿದೆ.