03 Sep 2025
Pic credit: Google
By: Vijayasarathy
Pic credit: Google
2025ರ ಸೆ. 2, ಭಾರತದ ಸೆಮಿಕಂಡಕ್ಟರ್ ಮಿಷನ್ಗೆ ಟರ್ನಿಂಗ್ ಪಾಯಿಂಟ್. ವಿಕ್ರಮ್ ಎನ್ನುವ 32-ಬಿಟ್ ಮೈಕ್ರೋಪ್ರೋಸಸರ್ ಅನಾವರಣಗೊಂಡಿತು.
Pic credit: Google
ಇಸ್ರೋದಿಂದ ಅಭಿವೃದ್ಧಿಯಾಗಿರುವ ವಿಕ್ರಮ್ ಭಾರತದಲ್ಲಿ ದೇಶೀಯವಾಗಿ ತಯಾರಾದ ಮೊದಲ ವಿಶ್ವದರ್ಜೆಯ 32 ಬಿಟ್ ಮೈಕ್ರೋ ಪ್ರೋಸಸರ್ ಎನಿಸಿದೆ.
Pic credit: Google
20ನೇ ಶತಮಾನ ತೈಲದಿಂದ ಪ್ರಭಾವಿತವಾದರೆ, 21ನೇ ಶತಮಾನದಲ್ಲಿ ಮೈಕ್ರೋಚಿಪ್ನ ಪಾತ್ರ ಹೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Pic credit: Google
ಆಟಿಕೆಯಿಂದ ಹಿಡಿದು ಸೆಟಿಲೈಟ್, ಮಿಸೈಲ್ ಇತ್ಯಾದಿ ಗಂಭೀರ ಉಪಕರಣಗಳಿಗೂ ಚಿಪ್ಗಳು ಬೇಕು. ಹೀಗಾಗಿ, ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಭಾರತ ಮುಂದಾಗಿದೆ.
Pic credit: Google
ವಿಕ್ರಮ್-3201 ಅನ್ನು ಮೊಹಾಲಿಯ ಸೆಮಿಕಂಡಕ್ಟರ್ ಲ್ಯಾಬೊರೇಟರಿಯಲ್ಲಿ ತಯಾರಿಸಲಾಗಿದೆ. ಇಸ್ರೋದ ಸ್ಪೇಸ್ ಮಿಷನ್ಗೆಂದು ಇದನ್ನು ವಿನ್ಯಾಸಗೊಳಿಸಲಾಗಿದೆ.
Pic credit: Google
ಈ ಮೈಕ್ರೋಚಿಪ್ಗಳು ಮೈನಸ್ 55 ಡಿಗ್ರಿ ಶೀತದಿಂದ ಹಿಡಿದು 125 ಡಿಗ್ರಿ ಬಿಸಿಯವರೆಗೆ ಶಾಖ ಸಹಿಸಿಕೊಳ್ಳಬಲ್ಲುವು. ವಿವಿಧ ಮಿಷನ್ಗಳಲ್ಲಿ ಇವುಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.
Pic credit: Google
ವಿಕ್ರಮ್ 3201 ಚಿಪ್ನಲ್ಲಿ ಸ್ವಂತ ಸಾಫ್ಟ್ವೇರ್ ಇಕೋಸಿಸ್ಟಂ ಇದೆ. ಅಡಾ ಕಂಪೈಲರ್, ಅಸೆಂಬ್ಲರ್, ಲಿಂಕರ್, ಸಿಮುಲೇಟರ್ ಮತ್ತು ಐಡಿಇ ಇದೆ. ಸಿ ಲ್ಯಾಂಗ್ವೇಜ್ ಕಂಪೈಲರ್ ಅಭಿವೃದ್ಧಿಪಡಿಸಲಾಗುತ್ತಿದೆ.
Pic credit: Google
ವಿಕ್ರಮ್ ಚಿಪ್ ಭಾರತದ ಚಿಪ್ ಸ್ವಾವಲಂಬನೆಯಲ್ಲಿ ಮೊದಲ ಹೆಜ್ಜೆ. ಭಾರತದಲ್ಲಿ ಸೆಮಿಕಂಡಕ್ಟರ್ ಮಿಷನ್ನ ಇತರ ಯೋಜನೆಗಳಿಗೆ ಇದು ಪುಷ್ಟಿ ನೀಡಬಲ್ಲುದು.