ನೀವು ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ರೀಲ್ಸ್ ನೋಡುತ್ತಾ ಹೋದಂತೆ ನಾನ್-ಸ್ಟಾಪ್ ಸ್ಕ್ರೋಲ್ ಮಾಡುತ್ತಿರುತ್ತೀರಿ. ಅದು ನಿಲ್ಲೋದೇ ಇಲ್ಲ.
Pic credit: Google
ಯಾಕೆ ಈ ಹುಚ್ಚು?
ಅಷ್ಟಕ್ಕೂ ನೀವು ಶಾರ್ಟ್ಸ್ ಮತ್ತು ರೀಲ್ಸ್ ನೋಡುವ ಚಟ ಹೇಗೆ ಬೆಳೆಸಿಕೊಳ್ಳುತ್ತೀರಿ? ಯಾಕೆ ನಿಮ್ಮನ್ನು ಈ ರೀಲ್ಸ್ ಆವರಿಸುತ್ತದೆ? ಇಲ್ಲಿವೆ ಕಾರಣಗಳು...
Pic credit: Google
ಡೊಪಮೈನ್
ನೀವು ಮನರಂಜನಿಯ ಕಿರು ವಿಡಿಯೋ ನೋಡುವಾಗ ಮಿದುಳಿನಲ್ಲಿ ಡೊಪಮೈನ್ ಎನ್ನುವ ಕೆಮಿಕಲ್ ರಿಲೀಸ್ ಆಗುತ್ತದೆ. ಇದು ನಿಮ್ಮನ್ನು ಅಡಿಕ್ಟ್ ಮಾಡುತ್ತದೆ.
Pic credit: Google
ಎಐ ಅಲ್ಗಾರಿದಂ
ಇನ್ಸ್ಟಾಗ್ರಾಮ್ನಲ್ಲಿ ಎಐ ಅಲ್ಗಾರಿದಂ ಅಳವಡಿಸಲಾಗಿರುತ್ತದೆ. ನೀವು ಇಷ್ಟಪಡುವ ರೀಲ್ಸ್ ಇದ್ದರೆ ಅದರಂತಹದ್ದೇ ಬೇರೆ ಬೇರೆ ವಿಡಿಯೋ ಬರುತ್ತಿರುತ್ತದೆ. ನೀವದರಿಂದ ಹೊರಬರಲು ಮನಸ್ಸಾಗಲ್ಲ.
Pic credit: Google
ಅಲ್ಪಾವಧಿ ವಿಡಿಯೋ
ರೀಲ್ಸ್ನಲ್ಲಿ ಬರೋ ವಿಡಿಯೋ 15ರಿಂದ 60 ಸೆಕೆಂಡ್ಸ್ ಇರಬಹುದು. ನೋಡಲು ಹೆಚ್ಚು ಸಮಯ ಬೇಕಾಗಲ್ಲ ಎನ್ನುವ ಭಾವನೆ ಮೂಡಿ, ಮತ್ತಷ್ಟು ವಿಡಿಯೋ ನೋಡಲು ಪ್ರೇರೇಪಿಸುತ್ತದೆ.
Pic credit: Google
ಗಮನ ಸೆಳೆಯುವ ದೃಶ್ಯ
ವೇಗದ ಮ್ಯೂಸಿಕ್, ಕಾಡುವ ಶಬ್ದ, ಎಡಿಟಿಂಗ್, ಟೆಕ್ಸ್ಟ್ ಇವೆಲ್ಲವೂ ಬೇಗನೇ ಆಕರ್ಷಿಸುತ್ತವೆ. ಮಿದುಳು ಉದ್ರೇಕಗೊಳ್ಳುವಂತೆ ಮಾಡುತ್ತವೆ.
Pic credit: Google
ಸುಲಭ ಬಳಕೆ
ರೀಲ್ಸ್ ಬಹಳ ಚುಟುಕಾಗಿರುತ್ತದೆ. ಮಿದುಳು ಶ್ರಮ ಇಲ್ಲದೇ ವಿಡಿಯೋದಲ್ಲೇನಿದೆ ತಿಳಿಯಬಹುದು.. ಒಂದು ಬೆರಳಲ್ಲೇ ವಿಡಿಯೋ ಬದಲಿಸುತ್ತಾ ಹೋಗಬಹುದು.
Pic credit: Google
ಲೈಕ್ಸ್ ಹುಚ್ಚು
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಲೈಕ್ಸ್, ಕಾಮೆಂಟ್ಸ್ ಪಡೆಯುವ ಉಮೇದಿಗೆ ಬಿದ್ದರೆ, ಪದೆ ಪದೇ ನೋಡುವ ಹುಚ್ಚು ಹಿಡಿಯುತ್ತದೆ.