ಪಾಸ್ವರ್ಡ್ ಇಲ್ಲದೇ ಫೋನ್ ಅನ್​​ಲಾಕ್ ಹೇಗೆ?

20 May 2025

Pic credit: Google

By: Vijayasarathy

ನೀವು ಮೊಬೈಲ್ ಪಾಸ್ವರ್ಡ್ ಅಥವಾ ಪ್ಯಾಟರ್ನ್ ಮರೆತುಹೋದರೆ ತೀರಾ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಕೆಲ ಮಾರ್ಗೋಪಾಯಗಳಿವೆ.

ಮರೆತರೆ ಚಿಂತೆ ಇಲ್ಲ

Pic credit: Google

ನಿಮ್ಮ ಮೊಬೈಲ್​​​ನಲ್ಲಿ ಗೂಗಲ್ ಅಕೌಂಟ್​​ಗೆ ಲಾಗಿನ್ ಆಗಿದ್ದರೆ, ಲ್ಯಾಪ್​ಟಾಪ್ ಅಥವಾ ಕಂಪ್ಯೂಟರ್​​​ನಲ್ಲೂ ಲಾಗಿನ್ ಆಗಬಹುದು. ಇದು ನಿಮಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ.

ಕನೆಕ್ಟೆಡ್ ಡಿವೈಸ್

Pic credit: Google

ನೀವು ಮೊಬೈಲ್​​ನ ಪಾಸ್ವರ್ಡ್ ಮರೆತುಹೋದಾಗ, ಅದೇ ಗೂಗಲ್ ಲಾಗಿನ್ ಇರುವ ಇನ್ನೊಂದು ಮೊಬೈಲ್ ಅಥವಾ ಕಂಪ್ಯೂಟರ್​​ಗೆ ಹೋಗಿ ಲಾಗಿನ್ ಆಗಿರಿ.

ಬೇರೆಡೆ ಲಾಗಿನ್ ಆಗಿ

Pic credit: Google

ಗೂಗಲ್ ಫೈಂಡ್ ಮೈ ಡಿವೈಸ್ ಅನ್ನು ಸರ್ಚ್​​ನ್ಲಲಿ ಶೋಧಿಸಿ. ಅಲ್ಲಿ ನಿಮ್ಮ ಗೂಗಲ್ ಅಕೌಂಟ್​​ಗೆ ಜೋಡಿತವಾದ ಎಲ್ಲಾ ಸಾಧನಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮಗೆ ಬೇಕಾದ್ದನ್ನು ಆರಿಸಿ.

ಫೈಂಡ್ ಮೈ ಡಿವೈಸ್

Pic credit: Google

ನಿಮ್ಮ ಮೊಬೈಲ್ ಆಯ್ಕೆ ಮಾಡಿಕೊಂಡು, ಸೆಕ್ಯೂರ್ ಡಿವೈಸ್ ಅನ್ನು ಆಯ್ದುಕೊಂಡು ಫೋನ್ ಅನ್ನು ಅನ್​​ಲಾಕ್ ಮಾಡಬಹುದು.

ಸೆಕ್ಯೂರ್ ಡಿವೈಸ್

Pic credit: Google

ನಿಮ್ಮದು ಸ್ಯಾಮ್ಸುಂಗ್ ಮೊಬೈಲ್ ಆಗಿದ್ದು ಸ್ಯಾಮ್ಸುಂಗ್ ಅಕೌಂಟ್​ಗೆ ಲಾಗಿನ್ ಆಗಿದ್ದರೆ ಆಗಲೂ ಕೂಡ ಮೊಬೈಲ್​ ಅನ್ನು ಅನ್​​ಲಾಕ್ ಮಾಡಬಹುದು.

ಸ್ಯಾಮ್ಸುಂಗ್ ಅಕೌಂಟ್

Pic credit: Google

ಫೋನ್ ಅನ್​​ಲಾಕ್ ಮಾಡಬಲ್ಲ ಥರ್ಡ್ ಪಾರ್ಟಿ ಸಾಫ್ಟ್​​ವೇರ್​​ಗಳು ಸಿಗುತ್ತವೆ. ಅವನ್ನು ಬಳಸಬಹುದು. DroidKit ಮತ್ತು PhonesGo Android Unlocker ಇದಕ್ಕೆ ಉದಾಹರಣೆ.

ಥರ್ಡ್ ಪಾರ್ಟಿ ಸಾಫ್ಟ್​​​ವೇರ್

Pic credit: Google

ಯಾವುದಕ್ಕೂ ಫೋನ್ ಅನ್​​ಲಾಕ್ ಆಗದೇ ಇದ್ದಾಗ ಕೊನೆಯ ಅಸ್ತ್ರವೇ ಫ್ಯಾಕ್ಟರಿ ರೀಸೆಟ್. ಇದನ್ನು ಮಾಡುವುದು ಹೇಗೆಂದು ಗೂಗಲ್​​ನಲ್ಲೇ ಮಾಹಿತಿ ಸಿಗುತ್ತದೆ.

ಫ್ಯಾಕ್ಟರಿ ರೀಸೆಟ್

Pic credit: Google