ಕ್ರೆಡಿಟ್ ಸ್ಕೋರ್ 770+ ಪಡೆಯೋದು ಹೇಗೆ?

08 May 2025

Pic credit: Google

By: Vijayasarathy

770ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಸುಲಭ ಸಾಲ ಸಿಗುತ್ತದೆ. ಈ ಸ್ಕೋರ್ ಪಡೆಯಲು ಏನು ಮಾಡಬೇಕು? ಮುಂದಿನ ಸ್ಲೈಡ್​​ಗಳಲ್ಲಿವೆ ಟಿಪ್ಸ್.

ಉತ್ತಮ ಸ್ಕೋರ್

Pic credit: Google

ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಯಾವುದೇ ರೀತಿಯ ಸಾಲಗಳನ್ನು ಮತ್ತು ಕಂತುಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟಿರಿ.

ಬಿಲ್ ಪಾವತಿ

Pic credit: Google

ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್​​ಗಳಲ್ಲಿರುವ ಒಟ್ಟಾರೆ ಕ್ರೆಡಿಟ್ ಮಿತಿಯಲ್ಲಿ ಶೇ. 30ಕ್ಕಿಂತ ಹೆಚ್ಚನ್ನು ವ್ಯಯಿಸದಂತೆ ಎಚ್ಚರ ವಹಿಸಿ.

ಕ್ರೆಡಿಟ್ ಬಳಕೆ ಮಿತಿ

Pic credit: Google

ವಿವಿಧ ರೀತಿಯ ಸಾಲಗಳಿರಲಿ. ಗೃಹಸಾಲದಂತಹ ಅಡಮಾನ ಸಾಲ ಇರಲಿ. ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್​ನಂತಹ ಅಡಮಾನರಹಿತ ಸಾಲವೂ ಇರಲಿ.

ಮಿಶ್ರ ಸಾಲ

Pic credit: Google

ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ. ಸ್ಕೋರ್ ಅಸಹಜವಾಗಿ ಕಡಿಮೆಗೊಂಡಿದ್ದರೆ ಕಾರಣ ಗೊತ್ತು ಮಾಡಿ ಸರಿಪಡಿಸಬಹುದು.

ರಿಪೋರ್ಟ್ ಪರಿಶೀಲನೆ

Pic credit: Google

ಕ್ರೆಡಿಟ್ ಕಾರ್ಡ್, ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಬ್ಯಾಂಕು ನಿಮ್ಮ ಕ್ರೆಡಿಟ್ ಪ್ರೊಫೈಲ್ ಪರಿಶೀಲಿಸುತ್ತದೆ. ಇದು ಪದೇ ಪದೇ ಆದಾಗ ಸ್ಕೋರ್ ಕಡಿಮೆ ಆಗಬಹುದು.

ಅಗತ್ಯ ಇದ್ದಾಗ ಸಾಲ

Pic credit: Google

ನೀವು ಮೊದಲಿಂದಲೂ ಬಳಸುತ್ತಾ ಬಂದಿದ್ದ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಅಕೌಂಟ್​​​ಗಳನ್ನು ನಿಲ್ಲಿಸಿದರೆ ಕ್ರೆಡಿಟ್ ಹಿಸ್ಟರಿ ತಗ್ಗುತ್ತದೆ. ಸ್ಕೋರ್ ಕಡಿಮೆ ಆಗಬಹುದು.

ಹಳೆಯ ಅಕೌಂಟ್ ಉಳಿಸಿ

Pic credit: Google

ನೀವು ಸಾಲ ಪಡೆದು ಅದನ್ನು ತೀರಿಸಲು ಕಷ್ಟವಾಗಿ ಬ್ಯಾಂಕ್​​ನೊಂದಿಗೆ ಸಂಧಾನ ಅರ್ಧಂಬರ್ಧ ಮರುಪಾವತಿಸಿದರೆ ಕ್ರೆಡಿಟ್ ಸ್ಕೋರ್​​ಗೆ ತೀವ್ರ ಘಾಸಿಯಾಗುತ್ತದೆ.

ಲೋನ್ ಸೆಟಲ್ಮೆಂಟ್ ಬೇಡ

Pic credit: Google