ಅತಿಹೆಚ್ಚು ಮೌಲ್ಯದ ಐಪಿಎಲ್ ತಂಡಗಳು

10 Dec 2025

Pic credit: Google

By: Vijayasarathy

D&P Advisory ಪ್ರಕಾರ ಐಪಿಎಲ್​ನ ಮೌಲ್ಯ ಸತತ 3ನೇ ಬಾರಿ ಕುಸಿದಿದೆ. 2022ರಲ್ಲಿ 11.2 ಬಿಲಿಯನ್ ಡಾಲರ್ ಇದ್ದ ಮೌಲ್ಯ 2025ರಲ್ಲಿ 8.8 ಬಿಲಿಯನ್ ಡಾಲರ್​ಗೆ ಇಳಿದಿದೆ.

ಐಪಿಎಲ್ ಮೌಲ್ಯ ಕುಸಿತ

Pic credit: Google

2025ರಲ್ಲಿ ಮೌಲ್ಯ ವೃದ್ಧಿಸಿಕೊಂಡ ಏಕೈಕ ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್. ಆರ್​ಸಿಬಿ ಒಂದು ಸ್ಥಾನ ಮೇಲೇರಿದೆ. ವಿವಿಧ ಐಪಿಎಲ್ ತಂಡಗಳ ಮೌಲ್ಯದ ಪಟ್ಟಿ ಮುಂದಿದೆ.

ವ್ಯಾಲ್ಯುಯೇಶನ್ ವ್ಯತ್ಯಾಸ

Pic credit: Google

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮೌಲ್ಯ 108 ಮಿಲಿಯನ್ ಡಾಲರ್ ಇದೆ. ಅತಿಹೆಚ್ಚು ಮೌಲ್ಯದ ತಂಡವಾಗಿ ಸಿಎಸ್​ಕೆಯನ್ನು ಅದು ಹಿಂದಿಕ್ಕಿದೆ.

1. ಮುಂಬೈ ಇಂಡಿಯನ್ಸ್

Pic credit: Google

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2025ರಲ್ಲಿ 105 ಮಿಲಿಯನ್ ಡಾಲರ್ ವ್ಯಾಲ್ಯುಯೇಶನ್ ಪಡೆದು ಎರಡನೇ ಸ್ಥಾನಕ್ಕೇರಿದೆ. ಕಳೆದ ವರ್ಷದಕ್ಕಿಂತ 1 ಸ್ಥಾನ ಮೇಲೇರಿದೆ.

2. ಆರ್​ಸಿಬಿ

Pic credit: Google

ಚೆನ್ನೈ ಸೂಪರ್ ಕಿಂಗ್ಸ್​ನ ಈ ವರ್ಷದ ಮೌಲ್ಯ 93 ಮಿಲಿಯನ್ ಡಾಲರ್. ಕಳೆದ ವರ್ಷ ಟಾಪ್ ಇದ್ದ ಈ ತಂಡ ಈ ಬಾರಿ 3ನೇ ಸ್ಥಾನಕ್ಕೆ ಇಳಿದಿದೆ. ಕಳೆದ ಸೀಸನ್​ನಲ್ಲಿ ಕೊನೆಯ ಸ್ಥಾನ ಪಡೆದಿದ್ದು ಕಾರಣ.

3. ಸಿಎಸ್​ಕೆ

Pic credit: Google

ಕೋಲ್ಕತಾ ನೈಟ್ ರೈಡರ್ಸ್ 74 ಮಿಲಿಯನ್ ಡಾಲರ್ ವ್ಯಾಲ್ಯುಯೇಶನ್ ಪಡೆದಿದೆ. ಶೇ. 33ರಷ್ಟು ಮೌಲ್ಯ ಕುಸಿದಿದೆ. 2024ರಲ್ಲಿ ಚಾಂಪಿಯನ್ ಆಗಿದ್ದ ಇದು 2025ರಲ್ಲಿ ಕಳಪೆ ಸಾಧನೆ ತೋರಿತು.

4. ಕೆಕೆಆರ್

Pic credit: Google

ಶುಬ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ 70 ಮಿಲಿಯನ್ ವ್ಯಾಲ್ಯುಯೇಶನ್ ಪಡೆದಿದೆ. 2024ಕ್ಕೆ ಹೋಲಿಸಿದರೆ ಮೌಲ್ಯ ಹೆಚ್ಚಿಸಿಕೊಂಡ ಏಕೈಕ ತಂಡ ಅದು.

5. ಗುಜರಾತ್ ಟೈಟನ್ಸ್

Pic credit: Google

ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೇಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ರಮವಾಗಿ 6ರಿಂದ 10ನೇ ಸ್ಥಾನ ಪಡೆದಿವೆ.

ಕೊನೆಯ 5 ತಂಡಗಳು

Pic credit: Google