07 July 2025

ಎಂಎಸ್ ಧೋನಿ ವ್ಯವಹಾರ ಮತ್ತು ಹೂಡಿಕೆಗಳು

Pic credit: Google

By: Vijayasarathy

1. ಗರುಡಾ ಏರೋಸ್ಪೇಸ್

Pic credit: Google

ಚೆನ್ನೈ ಮೂಲದ ಡ್ರೋನ್ ತಯಾರಕ ಕಂಪನಿ ಗರುಡಾ ಏರೋಸ್ಪೇಸ್​ನಲ್ಲಿ ಎಂಎಸ್ ಧೋನಿ ಹೂಡಿಕೆ ಮಾಡಿದ್ದಾರೆ. ಅದರ ಬ್ರ್ಯಾಂಡ್ ಅಂಬಾಸಡರ್ ಕೂಡ ಆಗಿದ್ದಾರೆ.

2. ಖಾತಾಬುಕ್

Pic credit: Google

ಬೆಂಗಳೂರಿನ ಫಿನ್​ಟೆಕ್ ಕಂಪನಿ ಖಾತಾಬುಕ್​​ನಲ್ಲಿ 2020ರಲ್ಲಿ ಧೋನಿ ಹೂಡಿಕೆ ಮಾಡಿದ್ದರು. ಎಷ್ಟು ಮೊತ್ತ ಎಂದು ಗೊತ್ತಿಲ್ಲ. ಈ ಸ್ಟಾರ್ಟಪ್​​ಗೂ ಧೋನಿ ಬ್ರ್ಯಾಂಡ್ ಅಂಬಾಸಡರ್.

3. ತಗಡಾ ರಹೋ

Pic credit: Google

ಬೆಂಗಳೂರು ಮೂಲದ ಫಿಟ್ನೆಸ್ ಸ್ಟಾರ್ಟಪ್ ತಗಡಾ ರಹೋದಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಈ ಕಂಪನಿ ಹೆಸರು ಚಿರಪರಿಚಿತ ಇದೆ.

4. ಶಾಖಾ ಹಾರಿ

Pic credit: Google

ಬೆಂಗಳೂರು ಮೂಲದ ಲಿಬರೇಟ್ ಫೂಡ್ಸ್ ಸಂಸ್ಥೆಯ Shaka Harry ಬ್ರ್ಯಾಂಡ್​​ನಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಸಸ್ಯ ಮೂಲದ ಪ್ರೋಟೀನ್ ಬ್ರ್ಯಾಂಡ್ ಇದು.

5. ಹೋಮ್​​ಲೇನ್

Pic credit: Google

ಬೆಂಗಳೂರಿನ ಇಂಟೀರಿಯರ್ ಡಿಸೈನಿಂಗ್ ಮಾಡುವ ಹೋಮ್​ಲೇನ್ ಎನ್ನುವ ಸ್ಟಾರ್ಟಪ್​​ನಲ್ಲಿ ಎಂಎಸ್ ಧೋನಿ ಹೂಡಿಕೆ ಮಾಡಿದ್ದಾರೆ.

6. ಕಾರ್ಸ್24

Pic credit: Google

ಸೆಕೆಂಡ್​ಹ್ಯಾಂಡ್ ಕಾರುಗಳ ಮಾರಾಟ ಮತ್ತು ಖರೀದಿ ಪ್ಲಾಟ್​ಫಾರ್ಮ್ ಆದ Cars24 ಸ್ಟಾರ್ಟಪ್​​ನಲ್ಲಿ ಎಂಎಸ್ ಧೋನಿ ಹೂಡಿಕೆ ಮಾಡಿದ್ದಾರೆ. ಅದರ ಬ್ರ್ಯಾಂಡ್ ಅಂಬಾಸಡರ್ ಕೂಡ ಆಗಿದ್ದಾರೆ.

7. ಇಮೋಟೋರಾಡ್

Pic credit: Google

ಎಲೆಕ್ಟ್ರಿಕ್ ಸೈಕಲ್ ತಯಾರಿಸುವ ಪುಣೆ ಮೂಲದ EMotorad ಸ್ಟಾರ್ಟಪ್​​ನಲ್ಲಿ ಎಂಎಸ್ ಧೋನಿ ಹೂಡಿಕೆ ಮಾಡಿದ್ದಾರೆ. ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ.

ಧೋನಿ ಇತರ ಹೂಡಿಕೆ

Pic credit: Google

ರಿಗಿ, 7ಇಂಕ್​ಬ್ರಿವ್ಸ್, ಬ್ಲೂಸ್ಮಾರ್ಟ್ ಇತ್ಯಾದಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮದೇ ಹಲವು ಬ್ರ್ಯಾಂಡ್​​ಗಳನ್ನು ಆರಂಭಿಸಿದ್ದಾರೆ. ವಿವಿಧ ಕ್ರೀಡಾ ತಂಡಗಳನ್ನು ಹೊಂದಿದ್ದಾರೆ.