31 Mar 2025

Pic credit: Google

ದುಬಾರಿ ದುನಿಯ; ಹೊಸ ವರ್ಷದಲ್ಲಿ ಬೆಲೆ ಏರಿಕೆ ಬಿಸಿ

By: Vijayasarathy SN

ಕೆಎಂಎಫ್ ಸಂಸ್ಥೆಯ ನಂದಿನಿ ಬ್ರ್ಯಾಂಡ್ ಹಾಲಿನ ದರ ಲೀಟರ್​​ಗೆ 4 ರೂನಷ್ಟು ಏರಿಕೆ ಆಗಿದೆ. ಕಳೆದ 2 ವರ್ಷದಲ್ಲಿ 5 ರೂನಷ್ಟು ಬೆಲೆ ಹೆಚ್ಚಳ ಆಗಿದೆ.

Pic credit: Google

ನಂದಿನಿ ಹಾಲು

ಕರ್ನಾಟಕದಲ್ಲಿ ವಿದ್ಯುತ್ ದುಬಾರಿಯಾಗಲಿದೆ. ಒಂದು ಯುನಿಟ್​​ಗೆ 35 ರೂ ಸರ್​ಚಾರ್ಜ್ ಹಾಕಲಾಗುತ್ತದೆ. ಇದರ ಜೊತೆಗೆ, ಯೂನಿಟ್​​ಗೆ 67 ಪೈಸೆ ದರ ಹೆಚ್ಚಳಕ್ಕೆ ಬೆಸ್ಕಾಂ ಮುಂದಾಗಿದೆ.

Pic credit: Google

ವಿದ್ಯುತ್ ದರ

ದೇಶದ ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್​​ಪ್ರೆಸ್ ವೇಗಳಲ್ಲಿ ಟೋಲ್ ದರವನ್ನು 25 ರೂವರೆಗೆ ಹೆಚ್ಚಿಸಲಾಗುತ್ತಿದೆ.

Pic credit: Google

ಟೋಲ್ ದರ

ಎಟಿಎಂಗಳಲ್ಲಿ ಫ್ರೀ ಲಿಮಿಟ್ ಮೀರಿ ಹೆಚ್ಚು ಬಾರಿ ವಹಿವಾಟು ನಡೆಸಿದರೆ, ಪ್ರತೀ ವಹಿವಾಟಿಗೂ ಶುಲ್ಕ ಇರುತ್ತದೆ. ಈ ದರ ಏರಿಕೆ ಆಗಲಿದೆ.

Pic credit: Google

ಎಟಿಎಂ ಶುಲ್ಕ

ಸಾಮಾನ್ಯವಾಗಿ, ನಿಮ್ಮ ಬ್ಯಾಂಕ್​ದಲ್ಲದ ಎಟಿಎಂಗಳಲ್ಲಿ ನೀವು ಬ್ಯಾಲನ್ಸ್ ನೋಡಲು, ಕ್ಯಾಷ್ ವಿತ್​​ಡ್ರಾ ಮಾಡಲು, ಯಾವುದೇ ಆದರೂ 5 ಬಾರಿ ಉಚಿತ ವಹಿವಾಟಿಗೆ ಅನುಮತಿ ಇದೆ.

Pic credit: Google

ಉಚಿತ ಮಿತಿ

ಈ ಉಚಿತ ಮಿತಿ ಮೀರಿದರೆ, ಪ್ರತಿ ಕ್ಯಾಷ್ ವಿತ್​​ಡ್ರಾಗೂ 21 ರೂ ಶುಲ್ಕ ನೀಡಬೇಕು. ಈಗ ಈ ದರವನ್ನು 23 ರೂಗೆ ಏರಿಸಲಾಗಿದೆ. ನಾನ್ ಫೈನಾನ್ಸ್ ವಹಿವಾಟಾದರೆ 8 ರೂ ಶುಲ್ಕ ಇರುತ್ತದೆ.

Pic credit: Google

23 ರೂ ಶುಲ್ಕ

ಪ್ರತೀ ತಿಂಗಳ ಆರಂಭದಲ್ಲಿ ವಿವಿಧ ತೈಲ ಮಾರುಕಟ್ಟೆ ಕಂಪನಿಗಳು ಎಲ್​​ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಬೆಲೆ ಇಳಿಕೆ ಆಗಬಹುದು, ಅಥವಾ ಏರಿಕೆ ಆಗಬಹುದು, ಅಥವಾ ಅದೇ ದರ ಮುಂದುವರಿಯಬಹುದು.

Pic credit: Google

ಎಲ್​​ಪಿಜಿ ದರ

ಬೆಂಗಳೂರು ದಿನೇ ದಿನೇ ದುಬಾರಿ ದುನಿಯಾ ಆಗುತ್ತಿದೆ. ಮೆಟ್ರೋ ಪ್ರಯಾಣ ದರ, ಬಿಎಂಟಿಸಿಯ ನಿತ್ಯದ ಮತ್ತು ಮಾಸಿಕ ಪಾಸ್ ದರಗಳು ಏರಿಕೆ ಆಗಿವೆ.

Pic credit: Google

ದುಬಾರಿ ಬೆಂಗಳೂರು