28 April 2025

ಪಾಕ್ ನಿರ್ಬಂಧ; ಭಾರತದ ಇಂಡಿಗೋಗೆ ನಷ್ಟವೆಷ್ಟು?

Pic credit: Google

By: Vijayasarathy

ಪಾಕ್ ನಿರ್ಬಂಧ

Pic credit: Google

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ಏರ್​​ಸ್ಪೇಸ್ ನಿರ್ಬಂಧಿಸಿದೆ.

ಫ್ಲೈಟ್ ಅಡಚಣೆ

Pic credit: Google

ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹೋಗಲು ಸಾಧ್ಯವಾಗದಿರುವುದು ಭಾರತದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅಡಚಣೆ ಆಗಿದೆ.

ಪಶ್ಚಿಮದ ಮಾರ್ಗ

Pic credit: Google

ಪಶ್ಚಿಮ ಏಷ್ಯಾ, ಯೂರೋಪ್, ಬ್ರಿಟನ್, ಕೆನಡಾ, ಅಮೆರಿಕ ಇತ್ಯಾದಿ ದೇಶಗಳಿಗೆ ಹೋಗುವ 800 ಫ್ಲೈಟ್​​​ಗಳಿಗೆ ತೊಂದರೆಯಾಗಿದೆ.

ಫ್ಲೈಟ್ ರದ್ದು

Pic credit: Google

ಭಾರತದ ಅತಿದೊಡ್ಡ ಏರ್​​ಲೈನ್ಸ್ ಆದ ಇಂಡಿಗೋ ಮೇ 7ರವರೆಗೆ ದೆಹಲಿಯಿಂದ ಆಲ್ಮಾಟಿ ಮತ್ತು ಟ್ಯಾಷ್​ಕೆಂಟ್​​ಗೆ ಹೋಗುವ ತನ್ನ ಫ್ಲೈಟ್​​ಗಳನ್ನು ನಿಲ್ಲಿಸಿದೆ.

ಪಾಕ್ ಮಾರ್ಗ

Pic credit: Google

ಭಾರತದಿಂದ ಹೊರದೇಶಕ್ಕೆ ಹೋಗುವ ಹೆಚ್ಚಿನ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹಾದು ಹೋಗುತ್ತಿದ್ದುವು.

ಬಳಸು ಮಾರ್ಗ

Pic credit: Google

ಪಾಕಿಸ್ತಾನಕ್ಕೆ ಪರ್ಯಾಯವಾಗಿ ಇರುವ ಬಳಸು ಮಾರ್ಗದಲ್ಲಿ ಹೋಗುವುದರಿಂದ ಇಂಧನ ವೆಚ್ಚ ಹೆಚ್ಚುತ್ತದೆ. ಟಿಕೆಟ್ ಬೆಲೆಯೂ ಹೆಚ್ಚುತ್ತದೆ.

ಇಂಡಿಗೋ ಷೇರು

Pic credit: Google

ಪಾಕಿಸ್ತಾನದ ಈ ಕ್ರಮದಿಂದಾಗಿ ಏ. 26ರಂದು ಇಂಡಿಗೋ ಏರ್​ಲೈನ್ಸ್​​ನ ಷೇರುಬೆಲೆ ಶೇ. 8ರಷ್ಟು ಕುಸಿದಿತ್ತು. 8,000 ಕೋಟಿ ರೂ ಮಾರ್ಕೆಟ್ ಕ್ಯಾಪ್ ನಷ್ಟವಾಯಿತು.

ಪಾಕ್​ಗೂ ನಷ್ಟ

Pic credit: Google

ಪಾಕಿಸ್ತಾನಕ್ಕೂ ಕೂಡ ಓವರ್​​ಫ್ಲೈಟ್ ಶುಲ್ಕ ಆದಾಯ ನಷ್ಟ. ಭಾರತೀಯ ಕಂಪನಿಗಳಿಂದ ಪಾಕ್​​ಗೆ ವರ್ಷಕ್ಕೆ 250 ಮಿಲಿಯನ್ ಡಾಲರ್ ಬರುತ್ತಿತ್ತು.