ಪಿಎಂ ಕಿಸಾನ್ ಸ್ಕೀಮ್, ತಿಳಿದಿರಬೇಕಾದ ಸಂಗತಿಗಳು
18 Nov 2025
Pic credit: Google
By: Vijayasarathy
ಯೋಜನೆ ಏನು?
Pic credit: Google
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಸರ್ಕಾರ ಒದಗಿಸುವ ಧನಸಹಾಯ. ವರ್ಷಕ್ಕೆ 3 ಕಂತುಗಳಲ್ಲಿ 6,000 ರೂ ನೀಡಲಾಗುತ್ತದೆ.
ಅರ್ಹರು ಯಾರು?
Pic credit: Google
ಕೃಷಿ ಭೂಮಿ ಹೊಂದಿರುವ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದಾರೆ. ಜಮೀನು ಮಾಲಕರಾಗಿರಬೇಕು. ಜಮೀನು ಕೃಷಿ ಭೂಮಿಯಾಗಿರಬೇಕು.
ಅನರ್ಹರು ಯಾರು?
Pic credit: Google
ವೈದ್ಯ, ಎಂಜಿನಿಯರ್ ಇತ್ಯಾದಿ ವೃತ್ತಿಪರರು, ಐಟಿ ಪಾವತಿದಾರರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಕೃಷಿ ಭೂಮಿ ಇದ್ದರೂ ಕೂಡ ಯೋಜನೆಗೆ ಅರ್ಹರಿರುವುದಿಲ್ಲ.
ನೊಂದಣಿ ಹೇಗೆ?
Pic credit: Google
ನೀವು ಯೋಜನೆಗೆ ಅರ್ಹರಾಗಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ, ಪಹಣಿ, ಆಧಾರ್ ದಾಖಲೆ ನೀಡಿ ನೊಂದಾಯಿಸಬಹುದು. ಪಿಎಂ ಕಿಸಾನ್ ವೆಬ್ಸೈಟ್ನಲ್ಲೂ ನೊಂದಣಿಗೆ ಅವಕಾಶ ಇದೆ.
ಇಕೆವೈಸಿ ಅಗತ್ಯ
Pic credit: Google
ನೀವು ಈ ಹಿಂದೆ ಯೋಜನೆಗೆ ನೊಂದಾಯಿಸಿಕೊಂಡಿದ್ದು ಹಣ ಬರುತ್ತಿಲ್ಲವಾದಲ್ಲಿ, ಇಕೆವೈಸಿ ಮಾಡುವುದು ಅಗತ್ಯ ಇರುತ್ತದೆ. ಆನ್ಲೈನ್ನಲ್ಲೇ ಇಕೆವೈಸಿ ಅಪ್ಡೇಟ್ ಮಾಡಬಹುದು.
ಬೆನಿಫಿಶಿಯರಿ ಲಿಸ್ಟ್
Pic credit: Google
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ವಿಳಾಸ: https://pmkisan.gov.in/ . ಇಲ್ಲಿ ಹೋದರೆ ಫಾರ್ಮರ್ಸ್ ಕಾರ್ನರ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಕಾಣುತ್ತದೆ.
ಎಲ್ಲರ ಹೆಸರು
Pic credit: Google
ಬೆನಿಫಿಶಿಯರಿ ಲಿಸ್ಟ್ ಪೇಜ್ನಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಊರಿನ ಹೆಸರು ಆಯ್ದುಕೊಂಡರೆ, ಆ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ನೋಡಬಹುದು.
10 ಕೋಟಿ ರೈತರು
Pic credit: Google
ದೇಶಾದ್ಯಂತ ಅಂದಾಜು ಸುಮಾರು 14-16 ಕೋಟಿ ರೈತ ಕುಟುಂಬಗಳಿರಬಹುದು. ಈ ಪೈಕಿ 10 ಕೋಟಿಯಷ್ಟು ರೈತರು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ.
ಹಣದ ಬಗ್ಗೆ ಮಕ್ಕಳಿಗೆ ಇದು ಕಲಿಸಿ
ವಿಶ್ವದ ಅಗ್ರಮಾನ್ಯ ಆರ್ಥಿಕತೆಗಳು
ಕುಟುಂಬದ ಭದ್ರತೆಗೆ ತಪ್ಪದೇ ಈ ಕೆಲಸ ಮಾಡಿ