ಆಗಸ್ಟ್ ಆರ್​ಬಿಐ ಎಂಪಿಸಿ ಸಭೆ: ಮುಖ್ಯಾಂಶಗಳು

06 Aug 2025

Pic credit: Google

By: Vijayasarathy

ಎಂಪಿಸಿ ಸಭೆ

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ 2025ರ ಆಗಸ್ಟ್​ನಲ್ಲಿ ಸಭೆ ನಡೆಯಿತು. ಇಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರಗಳ ವಿವರ...

Pic credit: Google

ರಿಪೋದರ

ಆರ್​ಬಿಐ ತನ್ನ ರಿಪೋದರ ಅಥವಾ ಬಡ್ಡಿದರವನ್ನು ಶೇ. 5.50ಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಎಲ್ಲಾ ಆರು ಸದಸ್ಯರು ಒಮ್ಮತದಿಂದ ನಿರ್ಧರಿಸಿದ್ದಾರೆ.

Pic credit: Google

ತಟಸ್ಥ ನಿಲುವು

ಆರ್​ಬಿಐ ತನ್ನ ನೀತಿ ನಿಲುವನ್ನು ‘ನ್ಯೂಟ್ರಲ್’ ಆಗಿ ಮುಂದುವರಿಸಿದೆ. ರಿಪೋದರ ಏರಿಸುವ ಅಥವಾ ಇಳಿಸುವ ಯಾವುದೇ ನಿರ್ಧಾರಕ್ಕೂ ಸಿದ್ಧ ಇರಲಿದೆ.

Pic credit: Google

ಹಣದುಬ್ಬರ

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 3.1ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಸಭೆಯಲ್ಲಿ ಇದು ಶೇ. 3.7 ಇರಬಹುದು ಎನ್ನಲಾಗಿತ್ತು.

Pic credit: Google

ಜಿಡಿಪಿ ದರ

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.50ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಸಭೆಯಲ್ಲಿ ಮಾಡಿದ ಅಂದಾಜೂ ಕೂಡ ಇದೇ ಆಗಿತ್ತು.

Pic credit: Google

ಟ್ಯಾರಿಫ್ ಪರಿಣಾಮ

ಅಮೆರಿಕ ವಿಧಿಸಿರುವ ಶೇ. 25ರಷ್ಟು ಟ್ಯಾರಿಫ್​ನಿಂದ ಭಾರತದ ಜಿಡಿಪಿ ಬೆಳವಣಿಗೆಗೆ 30-40 ಮೂಲಾಂಕಗಳಷ್ಟು ಹಿನ್ನಡೆಯಾಗಬಹುದು ಎಂದು ಆರ್​ಬಿಐ ಹೇಳಿದೆ.

Pic credit: Google

ರೀಕೆವೈಸಿ

ಹತ್ತು ವರ್ಷದ ಹಿಂದೆ ಆರಂಭಿಸಿದ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಪುನರ್ ಕೆವೈಸಿ ಮಾಡಲಾಗುತ್ತದೆ. ಪಮಚಾಯತ್ ಮಟ್ಟದಲ್ಲಿ ಬ್ಯಾಂಕುಗಳು ಸೆ. 30ರವರೆಗೆ ಕ್ಯಾಂಪ್ ಹಾಕಲಿವೆ.

Pic credit: Google

ರಿಟೇಲ್ ಡೈರೆಕ್ಟ್

ಆರ್​ಬಿಐನ ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್ ಅನ್ನು ಅಪ್​ಗ್ರೇಡ್ ಮಾಡಲಾಗಿದೆ. ವ್ಯಕ್ತಿಗಳು ನೇರವಾಗಿ ಇಲ್ಲಿಂದಲೇ ಟ್ರೆಷರಿ ಬಿಲ್​ಗಳಲ್ಲಿ ಹೂಡಿಕೆ ಮಾಡಬಹುದು.

Pic credit: Google