17 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ ಆರ್ಸಿಬಿ: ಆದ್ರೂ ಪ್ಲೇ ಆಫ್ ತಲುಪಿಲ್ಲ
18 May 2025 Author: Vinay Bhat
Pic credit - Google
ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನಕ್ಕೇರಿದೆ. ಆಡಿದ 12 ಪಂದ್ಯಗಳಲ್ಲಿ 8 ರಲ್ಲಿ ಜಯ 3 ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.482 ರನ್ ರೇಟ್ ಮೂಲಕ 17 ಅಂಕ ಪಡೆದಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ಗೆ ಏರಲಿದೆ.
ಆರ್ಸಿಬಿ
ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಿಂದ ಕೆಳಗಿಳಿದಿದೆ. ಇವರು ಆಡಿದ 11 ಪಂದ್ಯಗಳ ಪೈಕಿ ಎಂಟರಲ್ಲಿ ಜಯ ಸಾಧಿಸಿ ಮೂರರಲ್ಲಿ ಸೋತು 16 ಅಂಕ ಸಂಪಾದಿಸಿದೆ. +0.793 ರನ್ರೇಟ್ ಹೊಂದಿದೆ.
ಗುಜರಾತ್ ಟೈಟಾನ್ಸ್
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಏಳರಲ್ಲಿ ಜಯ- ಮೂರರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.376 ರನ್ರೇಟ್ನೊಂದಿಗೆ 15 ಅಂಕ ಪಡೆದುಕೊಂಡಿದೆ.
ಪಂಜಾಬ್ ಕಿಂಗ್ಸ್
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳಲ್ಲಿ ಐದು ಸೋಲು ಹಾಗೂ ಏಳು ಜಯ ಕಂಡು 14 ಅಂಕ ಪಡೆದುಕೊಂಡಿದ್ದು, +1.156 ರನ್ರೇಟ್ ಹೊಂದಿದೆ.
ಮುಂಬೈ ಇಂಡಿಯನ್ಸ್
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ನಾಲ್ಕು ಪಂದ್ಯದಲ್ಲಿ ಸೋಲು ಉಳಿದ 6 ರಲ್ಲಿ ಜಯ ಹಾಗೂ ಒಂದು ರದ್ದು ಕಂಡು 13 ಅಂಕ ಸಂಪಾದಿಸಿದೆ. +0.362 ರನ್ರೇಟ್ ಹೊಂದಿದೆ.
ಡೆಲ್ಲಿ ಕ್ಯಾಪಿಟಲ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಹೊರಬಿದ್ದಿದೆ. ಆಡಿರುವ 13 ಪಂದ್ಯಗಳಲ್ಲಿ ಐದರಲ್ಲಿ ಜಯ- ಆರರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದು ಕಾಣುವ ಮೂಲಕ +0.193 ರನ್ ರೇಟ್ ಹೊಂದಿದೆ.
ಕೆಕೆಆರ್
ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು 6 ಸೋಲು ಕಾಣುವ ಮೂಲಕ -0.469 ರನ್ರೇಟ್ ಹೊಂದಿದೆ.
ಲಕ್ನೋ ಸೂಪರ್ ಜೈಂಟ್ಸ್
ಸನ್ರೈಸರ್ಸ್ ಹೈದರಾಬಾದ್ ತಂಡ ಎಂಟನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಔಟ್ ಆಗಿದೆ. ಆಡಿದ 11 ಪಂದ್ಯದಲ್ಲಿ ಮೂರು ಗೆಲುವು- ಏಳು ಸೋಲು ಹಾಗೂ ಒಂದು ಪಂದ್ಯ ರದ್ದಾದ ಪರಿಣಾಮ 7 ಅಂಕ ಸಂಪಾದಿಸಿದೆ. -1.192 ರನ್ ರೇಟ್ ಹೊಂದಿದೆ.
ಸನ್ರೈಸರ್ಸ್ ಹೈದರಾಬಾದ್
ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ 12 ಪಂದ್ಯಗಳಲ್ಲಿ ಮೂರರಲ್ಲಿ ಜಯ- ಒಂಬತ್ತರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಎಂಟನೇ ಸ್ಥಾನದಲ್ಲಿದ್ದು, -0.718 ರನ್ ರೇಟ್ ಹೊಂದಿದೆ.
ರಾಜಸ್ಥಾನ್ ರಾಯಲ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಟೂರ್ನಿಯಿಂದ ಔಟ್ ಆಗಿದೆ. ಆಡಿರುವ 12 ಪಂದ್ಯಗಳಲ್ಲಿ ಒಂಬತ್ತು ಸೋಲು 3 ಗೆಲುವು ಮೂಲಕ 6 ಅಂಕ ಪಡೆದಿದೆ. ಈ ತಂಡ -0.992 ರನ್ ರೇಟ್ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.