07 December 2025

Pic credit - Pintrest

Author: Akshatha Vorkady

ಕೊನೆಗೂ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ  ಸ್ಮೃತಿ ಮಂಧಾನಾ

ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಕೊನೆಗೂ ತಮ್ಮ ವಿವಾಹದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸ್ಮೃತಿ ಮಂಧಾನಾ

Pic credit - Pintrest

ಸಂಗೀತ ನಿರ್ಮಾಪಕ ಪಲಾಶ್ ಮುಚ್ಚಲ್ ಜೊತೆ ಮದುವೆ ರದ್ದು ಮಾಡಿದ್ದನ್ನು ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ.

ಸ್ಮೃತಿ ಮಂಧಾನಾ

Pic credit - Pintrest

ಈ ಬಗ್ಗೆ ಸ್ಮೃತಿ ಮಂಧಾನಾ ಅವರ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಸ್ಟ್​ ಒಂದನ್ನು ಹಂಚಿಕೊಳ್ಳಲಾಗಿದೆ.

ಸ್ಮೃತಿ ಮಂಧಾನಾ

Pic credit - Pintrest

ಕಳೆದ ಕೆಲವು ವಾರಗಳಿಂದ ಈ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಇದೀಗ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಸ್ಮೃತಿ ಮಂಧಾನಾ

Pic credit - Pintrest

"ನಾನು ತುಂಬಾ ಖಾಸಗಿ ವ್ಯಕ್ತಿ, ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಇದಾಗ್ಯೂ ಮದುವೆಯನ್ನು ರದ್ದುಗೊಳಿಸಲಾಗಿದೆ" ಎಂದು ಬರೆಯಲಾಗಿದೆ. 

ಸ್ಮೃತಿ ಮಂಧಾನಾ

Pic credit - Pintrest

"ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸುತ್ತೇನೆ" ಎಂದು ಪೋಸ್ಟ್​ ನಲ್ಲಿ ಬರೆಯಲಾಗಿದೆ.

ಸ್ಮೃತಿ ಮಂಧಾನಾ

Pic credit - Pintrest

ಈ ವಿಷಯವನ್ನು ಇಲ್ಲಿಗೆ ಮುಗಿಸಿ, ಎಲ್ಲರೂ ಅದನ್ನು ಮರೆತು ಮುಂದುವರಿಯಬೇಕೆಂದು ಕೋರಿದ್ದು, ಸದ್ಯ ಪೋಸ್ಟ್​ ಎಲ್ಲೆಡೆ ವೈರಲ್​ ಆಗಿದೆ.

ಸ್ಮೃತಿ ಮಂಧಾನಾ

Pic credit - Pintrest

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸ್ಮೃತಿ ಮಂಧಾನ ಹಾಗೂ ಪಾಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 23 ರಂದು ನಡೆಯಬೇಕಿತ್ತು. 

ಸ್ಮೃತಿ ಮಂಧಾನಾ

Pic credit - Pintrest