ಹೊಸ ಬ್ಯುಸಿನೆಸ್ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ

20 July 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ಭಾರತ ಚಿತ್ರರಂಗದ ಬಲು ಬೇಡಿಕೆಯ ನಟಿಯರಲ್ಲಿ ಒಬ್ಬರು.

        ರಶ್ಮಿಕಾ ಮಂದಣ್ಣ

ರಶ್ಮಿಕಾ ನಟಿಸಿರುವ ಸತತ ನಾಲ್ಕು ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿವೆ. ಅದರಲ್ಲಿ ಮೂರು 1000 ಕೋಟಿ ದಾಟಿವೆ.

      ಭಾರಿ ದೊಡ್ಡ ಹಿಟ್

ರಶ್ಮಿಕಾ ಮಂದಣ್ಣ ಸಿನಿಮಾಗಳು ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೆ ಅವರ ಸಂಭಾವನೆಯೂ ಹೆಚ್ಚಾಗಿದೆ.

ರಶ್ಮಿಕಾ ಮಂದಣ್ಣ ಸಿನಿಮಾ

ಬುದ್ಧಿವಂತ ನಟಿಯಾಗಿರುವ ರಶ್ಮಿಕಾ, ಸಿನಿಮಾ ನಟನೆ ಜೊತೆಗೆ ಉದ್ಯಮಗಳಲ್ಲಿಯೂ ಹಣ ಹೂಡಿಕೆ ಮಾಡಿದ್ದಾರೆ.

 ಉದ್ಯಮಗಳಲ್ಲಿ ಹೂಡಿಕೆ

ಇದೀಗ ರಶ್ಮಿಕಾ ಮಂದಣ್ಣ ಹೊಸ ಉದ್ಯಮವೊಂದನ್ನು ಪ್ರಾರಂಭ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಹೊಸ ಉದ್ಯಮ ಪ್ರಾರಂಭ

ರಶ್ಮಿಕಾ, ತಾವು ಹೊಸ ಉದ್ಯಮ ಪ್ರಾರಂಭಿಸುತ್ತಿದ್ದು, ಇದಕ್ಕಾಗಿ ತಾಯಿಯ ಆಶೀರ್ವಾದ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.

    ತಾಯಿಯ ಆಶೀರ್ವಾದ

ಆದರೆ ರಶ್ಮಿಕಾ ತಾವು ಯಾವ ಉದ್ಯಮ ಪ್ರಾರಂಭಿಸುತ್ತಿರುವುದಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ, ಅದನ್ನು ಮಾತ್ರ ಗುಟ್ಟಾಗಿಟ್ಟಿದ್ದಾರೆ.

  ಮಾಹಿತಿ ಬಿಟ್ಟುಕೊಟ್ಟಿಲ್ಲ

ರಶ್ಮಿಕಾ, ಹೊಸ ಉದ್ಯಮದ ಪ್ರೋಮೋ ಶೂಟ್​ನಲ್ಲಿ ಭಾಗಿ ಆಗಿದ್ದು, ಕೆಲವೇ ದಿನಗಳಲ್ಲಿ ಗುಟ್ಟು ರಟ್ಟಾಗಲಿದೆ.

      ಪ್ರೋಮೋ ಶೂಟ್​