ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರಾಕರಿಸಿದ್ದೇಕೆ ಸಾಯಿ ಪಲ್ಲವಿ

08 May 2025

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ. ನಟನೆ ಜೊತೆಗೆ ಸೌಂದರ್ಯವೂ ಇರುವ ವಿರಳ ನಟಿಯರಲ್ಲಿ ಒಬ್ಬರು.

      ನಟಿ ಸಾಯಿ ಪಲ್ಲವಿ

ಬೇಡಿಕೆ ಇದೆಯೆಂದು ಸಿಕ್ಕ-ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಸಾಯಿ ಪಲ್ಲವಿ, ಸಾಕಷ್ಟು ಷರತ್ತುಗಳು ಅವರಿಗಿವೆ.

   ಸಿನಿಮಾ ಒಪ್ಪಿಕೊಳ್ಳಲ್ಲ

ದಳಪತಿ ವಿಜಯ್ ಜೊತೆಗೆ ಸಿನಿಮಾ ಮಾಡಲು ನಟಿಯರು ತುದಿಗಾಲಲ್ಲಿರುತ್ತಾರೆ. ಆದರೆ ಆ ಅವಕಾಶ ಸಿಕ್ಕರೂ ನಿರಾಕರಿಸಿದ್ದರು ಸಾಯಿ ಪಲ್ಲವಿ.

   ದಳಪತಿ ವಿಜಯ್ ಜೊತೆ

ವಿಜಯ್ ನಟನೆಯ ‘ಲಿಯೋ’ ಸಿನಿಮಾದ ನಾಯಕಿ ಪಾತ್ರವನ್ನು ಮೊದಲು ಸಾಯಿ ಪಲ್ಲವಿಗೆ ನೀಡಲಾಗಿತ್ತು. ಆದರೆ ನಟಿ ಬೇಡ ಎಂದರು.

‘ಲಿಯೋ’ ಸಿನಿಮಾ ನಾಯಕಿ

ನಾಯಕಿ ಪಾತ್ರಕ್ಕೆ ಸೂಕ್ತವಾದ ಪ್ರಾಧಾನ್ಯತೆ ಇಲ್ಲ ಎಂಬ ಕಾರಣಕ್ಕೆ ಆ ಸಿನಿಮಾ ಅವಕಾಶವನ್ನು ನಿರಾಕರಿಸಿದ್ದರು ನಟಿ.

    ಪ್ರಾಧಾನ್ಯತೆ ಇರಲಿಲ್ಲ

ಆ ನಂತರ ‘ಲಿಯೋ’ ಸಿನಿಮಾದ ನಾಯಕಿಯ ಪಾತ್ರ ತ್ರಿಷಾ ಕೃಷ್ಣನ್ ಕೈ ಸೇರಿತು, ಸಿನಿಮಾ ಸೂಪರ್ ಹಿಟ್ ಆಯ್ತು.

      ನಟಿ ತ್ರಿಷಾ ಕೃಷ್ಣನ್

ಸಿನಿಮಾಗಳಲ್ಲಿ ಪಾತ್ರ ಗಟ್ಟಿಯಾಗಿ ಇಲ್ಲದೇ ಹೋದರೆ ನಟಿಸುವುದಿಲ್ಲ ಸಾಯಿ ಪಲ್ಲವಿ. ಸಂಭಾವನೆಗಿಂತ ಪಾತ್ರವೇ ಅವರಿಗೆ ಮುಖ್ಯ.

 ಪಾತ್ರವೇ ಅವರಿಗೆ ಮುಖ್ಯ

ಸಾಯಿ ಪಲ್ಲವಿ ಪ್ರಸ್ತುತ ‘ರಾಮಾಯಣ’, ಹಾಗೂ ಶಿವಕಾರ್ತಿಕೇಯನ್ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕೈಯಲ್ಲಿರುವ ಸಿನಿಮಾಗಳು

Sai Pall