ಮಾಜಿ ಬಾಯ್​​ಫ್ರೆಂಡ್​​ಗಳ ಬಗ್ಗೆ ಮಾತನಾಡಿದ ನಟಿ ತಮನ್ನಾ ಭಾಟಿಯಾ

22 May 2026

By  Manjunatha

ತಮನ್ನಾ ಭಾಟಿಯಾ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಹಲವು ವರ್ಷಗಳಿಂದ ನಾಯಕಿಯಾಗಿ ಮಿಂಚುತ್ತಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಬಂದು 20 ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ.

     20 ವರ್ಷಕ್ಕೂ ಹೆಚ್ಚು

36 ವರ್ಷದ ಸುಂದರ ನಟಿ ತಮನ್ನಾ ಭಾಟಿಯಾ ಇನ್ನೂ ಮದುವೆ ಆಗಿಲ್ಲ. ಆದರೆ ಆಗಾಗ್ಗೆ ನಟರೊಟ್ಟಿಗೆ ಹೆಸರು ಕೇಳಿ ಬರುತ್ತಿರುತ್ತದೆ.

    36 ವರ್ಷದ ಸುಂದರಿ

ಇದೀಗ ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಪ್ರಕರಣಗಳ ಬಗ್ಗೆ ಮಾತನಾಡಿರುವ ತಮನ್ನಾ, ಮಾಜಿ ಬಾಯ್​​ಫ್ರೆಂಡ್​​ಗಳ ಬಗ್ಗೆ ಹೇಳಿದ್ದಾರೆ.

  ಪ್ರೇಮ ಪ್ರಕರಣಗಳ ಬಗ್ಗೆ

ನನ್ನ ಯಾವ ಮಾಜಿ ಬಾಯ್​​ಫ್ರೆಂಡ್​​ಗಳು ಸಹ ಕೆಟ್ಟವರಾಗಿರಲಿಲ್ಲ. ಎಲ್ಲರೂ ಒಳ್ಳೆಯವಾಗಿದ್ದರು, ಒಳ್ಳೆಯ ಮನಸುಳ್ಳವರಾಗಿದ್ದರು ಎಂದಿದ್ದಾರೆ.

 ಮಾಜಿ ಬಾಯ್​​ಫ್ರೆಂಡ್​​ಗಳು

ನನ್ನ ಮಾಜಿ ಬಾಯ್​​ಫ್ರೆಂಡ್​ಗಳನ್ನು ನಾನು ದ್ವೇಷಿಸುವುದಿಲ್ಲ. ಹಲವರೊಟ್ಟಿಗೆ ನನಗೆ ಈಗಲೂ ಗೆಳೆತನ ಇದೆ ಎಂದಿದ್ದಾರೆ.

   ನಾನು ದ್ವೇಷಿಸುವುದಿಲ್ಲ

ಆದರೆ ತಾವು ಜೀವನದಲ್ಲಿ ಬಹಳ ದ್ವೇಷಿಸುವ ಒಂದಿಬ್ಬರು ಜನರಿದ್ದಾರೆ. ಅವರು ನನ್ನಲ್ಲಿ ನೆಗೆಟಿವ್ ಎನರ್ಜಿ ಸೃಷ್ಟಿಸುತ್ತಾರೆ ಎಂದಿದ್ದಾರೆ.

       ನೆಗೆಟಿವ್ ಎನರ್ಜಿ 

ತಮನ್ನಾ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದರು ಬಳಿಕ ಬ್ರೇಕಪ್ ಮಾಡಿಕೊಂಡರು. ಆ ಹಿಂದೆ ಕೆಲವು ನಟರೊಟ್ಟಿಗೆ ಅವರ ಹೆಸರು ಕೇಳಿ ಬಂದಿತ್ತು.

 ಬ್ರೇಕಪ್ ಮಾಡಿಕೊಂಡರು