ಪುನೀತ್ ರಾಜ್​ಕುಮಾರ್ ವ್ಯಕ್ತಿತ್ವ ಕೊಂಡಾಡಿದ ಬಾಲಿವುಡ್ ನಟಿ

12 Apr 2025

By  Manjunatha

ಪುನೀತ್ ರಾಜ್​ಕುಮಾರ್​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಾಮಾನ್ಯರು ಮಾತ್ರವಲ್ಲ ಸಿನಿಮಾ ಸೆಲೆಬ್ರಿಟಿಗಳು ಸಹ ಅವರ ಅಭಿಮಾನಿಗಳು.

   ಪುನೀತ್ ರಾಜ್​ಕುಮಾರ್

ಹಲವು ಸ್ಟಾರ್ ನಟರೊಟನೆ ನಟಿಸಿರುವ ಖ್ಯಾತ ಬಾಲಿವುಡ್ ನಟಿಯೊಬ್ಬರು ಪುನೀತ್ ರಾಜ್​ಕುಮಾರ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

    ಖ್ಯಾತ ಬಾಲಿವುಡ್ ನಟಿ

ಪುನೀತ್ ರಾಜ್​ಕುಮಾರ್ ಜೊತೆಗೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿರುವ ಅದಾ ಶರ್ಮಾ, ಅಪ್ಪು ಅವರ ಸರಣ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ.

    ‘ರಣವಿಕ್ರಮ’ ನಾಯಕಿ

‘ರಣವಿಕ್ರಮ’ ಸಿನಿಮಾ ಶೂಟಿಂಗ್ ದಿನಗಳ ನೆನಪು ಮಾಡಿಕೊಂಡಿರುವ ಅದಾ ಶರ್ಮಾ, ಅಪ್ಪು ಅವರ ಒಳ್ಳೆಯತನ, ಸರಳತೆಗೆ ಉದಾಹರಣೆ ನೀಡಿದ್ದಾರೆ.

ಶೂಟಿಂಗ್ ದಿನಗಳ ನೆನಪು

ಫೇಸ್​ಬುಕ್​ನಲ್ಲಿ ಪುನೀತ್ ಅವರ ಬಗ್ಗೆ ಬರೆದುಕೊಂಡಿದ್ದು, ಪುನೀತ್ ಅವರನ್ನು ಹತ್ತಿರದಿಂದ ನೋಡಿ ತಾವು ಅವರ ಅಭಿಮಾನಿ ಆಗಿದ್ದಾಗಿ ಹೇಳಿದ್ದಾರೆ.

     ಪುನೀತ್ ಬಗ್ಗೆ ಬರೆಹ

ನಾನು ಎಂದಾದರೂ ಸ್ಟಾರ್ ನಟಿ ಆದರೆ ಪುನೀತ್ ಹೇಗೆ ನಡೆದುಕೊಳ್ಳುತ್ತಾರೋ ಹಾಗೆಯೇ ನಡೆದುಕೊಳ್ಳಬೇಕು ಎಂದುಕೊಂಡಿದ್ದರಂತೆ.

    ಪುನೀತ್ ರೀತಿ ವ್ಯಕ್ತಿತ್ವ

ಅಂದಹಾಗೆ ಅದಾ ಶರ್ಮಾ, ಅಲ್ಲು ಅರ್ಜುನ್, ಅಕ್ಷಯ್ ಕುಮಾರ್, ಸಂಜಯ್ ದತ್ ಅಂಥಹಾ ಸ್ಟಾರ್ ನಟರೊಡನೆಯೂ ನಟಿಸಿದ್ದಾರೆ.

       ಸ್ಟಾರ್ ನಟರೊಡನೆ

‘ದಿ ಕಶ್ಮೀರ್ ಫೈಲ್ಸ್’, ‘ಸನ್ ಆಫ್ ಸತ್ಯಮೂರ್ತಿ’, ‘ಸೆಲ್ಫಿ’ ಇನ್ನೂ ಕೆಲ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

       ‘ದಿ ಕಶ್ಮೀರ್ ಫೈಲ್ಸ್’