ರಜನೀಕಾಂತ್ ಸಿನಿಮಾಕ್ಕಾಗಿ ಒಳ್ಳೆಯ ಪಾತ್ರವುಳ್ಳ ಸಿನಿಮಾ ಬಿಟ್ಟ ಶ್ರುತಿ ಹಾಸನ್

03 July 2025

By  Manjunatha

ನಟಿ ಶ್ರುತಿ ಹಾಸನ್, ಕಮಲ್ ಹಾಸನ್ ಮಗಳಾಗಿದ್ದರೂ ಸಹ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

        ನಟಿ ಶ್ರುತಿ ಹಾಸನ್

16 ವರ್ಷಗಳಿಂದಲೂ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ ಶ್ರುತಿ.

   ಚಿತ್ರರಂಗದಲ್ಲಿ ನಾಯಕಿ

ಆದರೆ ಶ್ರುತಿ ಹಾಸನ್ ಇತ್ತೀಚೆಗೆ ಒಂದು ಸಿನಿಮಾಕ್ಕೆ ಆಯ್ಕೆ ಆಗಿದ್ದರು. ಪ್ರೋಮೊ ಸಹ ಬಿಡುಗಡೆ ಆಗಿತ್ತು. ಆದರೆ ಹಠಾತ್ತನೇ ಸಿನಿಮಾದಿಂದ ದೂರಾದರು.

ಸಿನಿಮಾಕ್ಕೆ ಆಯ್ಕೆ ಆಗಿದ್ದರು

‘ಡಕೈಟ್’ (Dacoit) ಹೆಸರಿನ ತೆಲುಗು ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ಶ್ರುತಿ ಹಾಸನ್ ನಾಯಕಿಯಾಗಿದ್ದರು. ಆಡವಿಶೇಷ್ ಸಿನಿಮಾದ ನಾಯಕ.

ಪ್ಯಾನ್ ಇಂಡಿಯಾ ಸಿನಿಮಾ

ಶ್ರುತಿ ಹಾಸನ್ ಮತ್ತು ಅಡವಿ ಶೇಷ್ ಅವರ ಪ್ರೊಮೋ ಸಹ ಬಿಡುಗಡೆ ಆಗಿತ್ತು. ಆದರೆ ಆ ಬಳಿಕ ಶ್ರುತಿ ಹಾಸನ್ ಸಿನಿಮಾದಿಂದ ದೂರಾದರು.

ಶ್ರುತಿ ಹಾಸನ್ ಅಡವಿ ಶೇಷ್

ಶ್ರುತಿ ಹಾಸನ್ ಬದಲಿಗೆ ಚಿತ್ರತಂಡ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.

 ನಟಿ ಮೃಣಾಲ್ ಠಾಕೂರ್

ಹಠಾತ್ತನೆ ನಾಯಕಿ ಬದಲಾದ ಬಗ್ಗೆ ಮಾತನಾಡಿರುವ ಸಿನಿಮಾದ ನಾಯಕ ಅಡವಿ ಶೇಷ್, ಶ್ರುತಿ ಹಾಸನ್ ಅವರದ್ದೆ ತಪ್ಪು ಎಂದಿದ್ದಾರೆ.

     ನಾಯಕ ಅಡವಿ ಶೇಷ್

ಶ್ರುತಿ ಹಾಸನ್ ಅವರು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾಕ್ಕಾಗಿ ನಮ್ಮ ಸಿನಿಮಾ ಅನ್ನು ಬಿಟ್ಟು ಹೋದರು ಎಂದಿದ್ದಾರೆ.

      ‘ಕೂಲಿ’ ಸಿನಿಮಾಕ್ಕಾಗಿ