ಸತತ ಹಿಟ್ ಸಿನಿಮಾಗಳು ಸಂಭಾವನೆ ಹೆಚ್ಚಿಸಿಕೊಂಡ ನಟಿ ಮಮಿತಾ ಬಿಜು

24 SEP 2026

By  Manjunatha

ಮಮಿತಾ ಬಿಜು ಮಲಯಾಳಂ ಮೂಲದ ನಟಿ, ಆದರೆ ಈಗ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ.

      ಮಲಯಾಳಂ ನಟಿ

ಹಲವು ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಹ ಮಮಿತಾ ಬಿಜುಗೆ ಇತ್ತೀಚೆಗಷ್ಟೆ ಹಿಟ್ ದೊರಕಿವೆ.

   ಇತ್ತೀಚೆಗಷ್ಟೆ ಹಿಟ್ ಸಿಕ್ತು

‘ಪ್ರೇಮಲು’ ಸಿನಿಮಾದ ಬಳಿಕ ಮಮಿತಾ ಬಿಜು ಒಂದರಹಿಂದೊಂದು ಹಿಟ್ ಕೊಡುತ್ತಲೇ ಹೋಗುತ್ತಿದ್ದಾರೆ.

‘ಪ್ರೇಮಲು’ ಸಿನಿಮಾ ಬಳಿಕ

ಮಮಿತಾ ಬಿಜು ಅವರು ಬಲು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಬೇಡಿಕೆಯ ಜೊತೆಗೆ ಸಂಭಾವನೆ ಏರಿಕೆ ಆಗಿದೆ.

     ಬಲು ಬೇಡಿಕೆಯ ನಟಿ

‘ಪ್ರೇಮಲು’ ಸಿನಿಮಾಕ್ಕೂ ಸಹ ಕೇವಲ ಲಕ್ಷಗಳಲ್ಲಿ ಅದರಲ್ಲೂ ಬಹಳ ಕಡಿಮೆ ಸಂಭಾವನೆ ಪಡೆಯುತ್ತಿದ್ದರು ಮಮಿತಾ ಬಿಜು.

ಕೇವಲ ಲಕ್ಷ ಪಡೆಯುತ್ತಿದ್ರು

ಈಗ ಸತತ ಹಿಟ್ ಸಿನಿಮಾಗಳ ಬಳಿಕ ಮಮಿತಾ ಬಿಜು ಸಂಭಾವನೆ ಕೋಟಿಗಳಿಗೆ ಏರಿದೆ.

ಮಮಿತಾ ಬಿಜು ಸಂಭಾವನೆ

ಮೂಲಗಳ ಪ್ರಕಾರ, ಮಮಿತಾ ಬಿಜು ಪ್ರತಿ ಸಿನಿಮಾಕ್ಕೆ ಈಗ ಐದು ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರಂತೆ.

 ಸಂಭಾವನೆ ಎಷ್ಟು ಕೋಟಿ

ಮಮಿತಾ ಬಿಜು ಈಗ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ.

    ಹಲವು ಸಿನಿಮಾಗಳಲ್ಲಿ