ಪ್ರಭಾಸ್ ಜೊತೆ ನಟಿಸಲು ಬರುತ್ತಿದ್ದಾರೆ ನಟಿ ಆಲಿಯಾ ಭಟ್?

25 July 2026

By  Manjunatha

ಆಲಿಯಾ ಭಟ್, ಬಾಲಿವುಡ್​​ನ ಸೂಪರ್ ಸ್ಟಾರ್ ನಟಿ. ಕೇವಲ ಒಂದು ದಕ್ಷಿಣದ ಸಿನಿಮಾನಲ್ಲಿ ಅವರು ನಟಿಸಿದ್ದಾರೆ.

     ಸೂಪರ್ ಸ್ಟಾರ್ ನಟಿ

ರಾಜಮೌಳಿ ನಿರ್ದೇಶನದ ‘ಆರ್​​ಆರ್​​ಆರ್’ ಸಿನಿಮಾನಲ್ಲಿ ಆಲಿಯಾ ಭಟ್ ನಟನೆ ಮಾಡಿದ್ದಾರೆ.

   ‘ಆರ್​​ಆರ್​​ಆರ್’ ಸಿನಿಮಾ

ಇದೀಗ ಆಲಿಯಾ ಭಟ್ ಅವರು ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ. ಅದೂ ಮತ್ತೊಮ್ಮೆ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ.

    ದಕ್ಷಿಣಕ್ಕೆ ಬರುತ್ತಿದ್ದಾರೆ

ಆಲಿಯಾ ಭಟ್ ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ ಎನ್ನಲಾಗಿದೆ.

 ‘ಕಲ್ಕಿ 2898 ಎಡಿ’ ಸಿನಿಮಾ

‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಪ್ರಮುಖ ಪಾತ್ರದಲ್ಲಿ ನಟಿಸಲು ಆಲಿಯಾ ಅವರು ಶೀಘ್ರವೇ ಹೈದರಾಬಾದ್​​ಗೆ ಬರಲಿದ್ದಾರೆ.

 ಹೈದರಾಬಾದ್​​ಗೆ ಆಗಮನ

ದೀಪಿಕಾ ಪಡುಕೋಣೆ ಅವರನ್ನು ಇದೇ ಸಿನಿಮಾದಿಂದ ಕೈಬಿಡಲಾಗಿದ್ದು, ಆ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಖಾತ್ರಿ ಇಲ್ಲ.

     ದೀಪಿಕಾ ಪಡುಕೋಣೆ

ಆದರೆ ದೀಪಿಕಾ ಬಿಟ್ಟು ಹೋಗಿರುವ ಪಾತ್ರದಲ್ಲಿ ಆಲಿಯಾ ನಟಿಸುತ್ತಿಲ್ಲ, ಬದಲಿಗೆ ಇದು ಬೇರೆಯದ್ದೇ ಪಾತ್ರವಂತೆ.

   ಬೇರೆಯದ್ದೇ ಪಾತ್ರವಂತೆ

ಆಲಿಯಾ ಭಟ್ ಅವರದ್ದು ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಅತಿಥಿ ಪಾತ್ರವಷ್ಟೆ ಆಗಿದೆ.

 ‘ಕಲ್ಕಿ 2898 ಎಡಿ’ ಸಿನಿಮಾ