ದೀಪಿಕಾ ಪಡುಕೋಣೆ ಬಿಟ್ಟು ಹೋದ ಪಾತ್ರಕ್ಕೆ ಆಲಿಯಾ ಭಟ್?

16 OCT 2025

By  Manjunatha

ದೀಪಿಕಾ ಪಡುಕೋಣೆ ಒಂದರ ಹಿಂದೊಂದರಂತೆ ಎರಡು ತೆಲುಗು ಸಿನಿಮಾಗಳಿಂದ ಹೊರಹಾಕಲ್ಪಟ್ಟಿದ್ದಾರೆ.

  ನಟಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆಯನ್ನು ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊರ ಹಾಕಲಾಗಿದೆ.

  2 ಸಿನಿಮಾದಿಂದ ಹೊರಗೆ

‘ಕಲ್ಕಿ 2898 ಎಡಿ’ ಸಿನಿಮಾದ ಒಂದು ಭಾಗ ಚಿತ್ರೀಕರಣವಾಗಿದ್ದು, ಎರಡನೇ ಭಾಗದ ಚಿತ್ರೀಕರಣ ಬಾಕಿ ಇದೆ.

        ‘ಕಲ್ಕಿ 2898 ಎಡಿ’

ಎರಡನೇ ಭಾಗದಲ್ಲಿಯೂ ದೀಪಿಕಾ ಪಡುಕೋಣೆ ಪಾತ್ರ ಬಹಳ ಮುಖ್ಯವಾಗಿದ್ದು, ಆ ಪಾತ್ರಕ್ಕೆ ನಟಿಯ ಹುಡುಕಾಟ ಸಾಗಿದೆ.

    ದೀಪಿಕಾ ಪಾತ್ರ ಮುಖ್ಯ

ಇತ್ತೀಚೆಗಿನ ಕೆಲ ಸುದ್ದಿಯಂತೆ ‘ಕಲ್ಕಿ 2898 ಎಡಿ’ ಸಿನಿಮಾದ ದೀಪಿಕಾ ಪಾತ್ರಕ್ಕೆ ಆಲಿಯಾ ಭಟ್​​ರನ್ನು ಆಯ್ಕೆ ಮಾಡಲಾಗುತ್ತಿದೆಯಂತೆ.

   ಆಲಿಯಾ ಭಟ್​​ ಆಯ್ಕೆ?

ಈ ಬಗ್ಗೆ ಚರ್ಚೆಯೊಂದು ಚಾಲ್ತಿಯಲ್ಲಿದ್ದು, ದೀಪಿಕಾರಿಂದ ತೆರವಾದ ಪಾತ್ರ ಆಲಿಯಾ ಪಾಲಾಗಲಿದೆ ಎನ್ನಲಾಗುತ್ತಿದೆ.

    ಸುದ್ದಿ ಹರಿದಾಡುತ್ತಿದೆ

ಅಸಲಿಗೆ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಪರಸ್ಪರ ಗೆಳತಿಯರಾಗಿದ್ದು ಆಲಿಯಾ ‘ಕಲ್ಕಿ’ ಪಾತ್ರ ಒಪ್ಪಿಕೊಳ್ಳುತ್ತಾರಾ ಎಂಬುದು ಪ್ರಶ್ನೆ.

     ಪರಸ್ಪರ ಗೆಳತಿಯರು

ಆಲಿಯಾ ಭಟ್ ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿಯ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ಸಂಜಯ್ ಲೀಲಾ ಬನ್ಸಾಲಿ