ತಾಯಿಯಾದ ಬಳಿಕ ಆಗಿರುವ ಬದಲಾವಣೆಗಳ ಬಗ್ಗೆ ಆಲಿಯಾ ಭಟ್ ಮಾತು

25 May 2025

By  Manjunatha

ಆಲಿಯಾ ಭಟ್ ಕಳೆದ ವರ್ಷವಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಹೆಸರು ರಾಹಾ ಕಪೂರ್.

     ನಟಿ ಆಲಿಯಾ ಭಟ್

ಸ್ಟಾರ್ ನಟಿಯಾಗಿದ್ದಾಗಲೇ ತಾಯಿಯಾದ ಆಲಿಯಾ ಭಟ್, ಆ ನಂತರವೂ ಸ್ಟಾರ್ ಗಿರಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

   ತಾಯಿಯಾದ ಆಲಿಯಾ 

ಇದೀಗ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಆಲಿಯಾ ಭಟ್​ಗೆ ತಾಯಿಯಾದ ಬಳಿಕ ಜೀವನದಲ್ಲಾದ ಬದಲಾವಣೆ ಬಗ್ಗೆ ಕೇಳಲಾಗಿದೆ.

   ಕಾನ್ ಚಿತ್ರೋತ್ಸವದಲ್ಲಿ

ಇದಕ್ಕೆ ಆಲಿಯಾ ಭಟ್ ಸುದೀರ್ಘ ಉತ್ತರ ನೀಡಿದ್ದಾರೆ. ಹಲವು ಮುಖ್ಯವಾದ ಬದಲಾವಣೆಗಳನ್ನು ಆಲಿಯಾ ಭಟ್ ಹೇಳಿದ್ದಾರೆ.

 ಮುಖ್ಯವಾದ ಬದಲಾವಣೆ

ಆಲಿಯಾ ಈಗ ಹೆಚ್ಚು ಸೂಕ್ಷ್ಮವಾಗಿದ್ದಾರಂತೆ. ಇತರರ ಕಷ್ಟ, ನೋವುಗಳಿಗೆ ಹೆಚ್ಚು ಕರಗುತ್ತಾರಂತೆ. ನನ್ನ ಮಗುವಿಗೆ ಹೀಗಾದರೆ ಎಂಬ ಯೋಚನೆ ಹೆಚ್ಚಾಗಿ ಬರುತ್ತದೆಯಂತೆ.

    ಸಾಕಷ್ಟು ಬದಲಾವಣೆ

ಮೊದಲೆಲ್ಲ ಆಲಿಯಾ ಭಟ್​ಗೆ ಆಗಾಗ ಖಿನ್ನತೆ ಉಂಟಾಗುತ್ತಿತ್ತಂತೆ, ನಾನು ಒಂಟಿ ಅನಿಸುತ್ತಿತ್ತಂತೆ ಆದರೆ ಈಗ ಹಾಗೆ ಅನಿಸುವುದೇ ಇಲ್ಲವಂತೆ.

ಈಗ ಒಂಟಿ ಅನಿಸುವುದಿಲ್ಲ

ಆಲಿಯಾ ಭಟ್ ಈಗ ತಮ್ಮ ಬಗ್ಗೆ ಯೋಚನೆ ಮಾಡುವುದನ್ನೇ ನಿಲ್ಲಿಸಿದ್ದಾರಂತೆ. ಹತ್ತಿರ ಇರಲಿ, ದೂರ ಇರಲಿ ಮಗಳ ಬಗ್ಗೆಯೇ ಯೋಚನೆಗಳು ಇರುತ್ತವೆಯಂತೆ.

ಯೋಚನೆಗಳು ಬದಲಾಗಿವೆ

ಆದರೆ ಆಲಿಯಾ ಭಟ್ ಅವರ ಸಿನಿಮಾ ಆಯ್ಕೆಗಳ ಮೇಲೆ ತಾಯ್ತನ ಯಾವುದೇ ರೀತಿಯ ವಿಶೇಷ ಪರಿಣಾಮ ಬೀರಿಲ್ಲವಂತೆ.

ವೃತ್ತಿ ಮೇಲೆ ಪ್ರಭಾವವಿಲ್ಲ