ಜೆನ್-ಜಿ ಬಳಿಕ ಅಸ್ಸಾಂ ಪರ ದನಿ ಎತ್ತಿದ ನಟಿ ಆಲಿಯಾ ಭಟ್

30 July 2026

By  Manjunatha

ಆಲಿಯಾ ಭಟ್ ಬಾಲಿವುಡ್​​ನ ಸೂಪರ್ ಸ್ಟಾರ್ ನಟಿ. ಭಾರತದ ಅತ್ಯಂತ ಪ್ರಭಾವಿ ನಟಿಯರಲ್ಲಿ ಒಬ್ಬರು.

     ಸೂಪರ್ ಸ್ಟಾರ್ ನಟಿ

ಇತ್ತೀಚೆಗಷ್ಟೆ ನಡೆದ ಕೇಂದ್ರ ಸರ್ಕಾರದ ವಿರುದ್ಧ ಜೆನ್-ಜಿಗಳ ಪ್ರತಿಭಟನೆಗೆ ನಟಿ ಆಲಿಯಾ ಭಟ್ ಬೆಂಬಲಿಸಿದ್ದರು.

ಕೇಂದ್ರ ಸರ್ಕಾರದ ವಿರುದ್ಧ

ಇದೀಗ ಆಲಿಯಾ ಭಟ್ ಅವರು ಅಸ್ಸಾಂ ಪ್ರವಾಹ ಪೀಡಿತರ ಪರವಾಗಿ ದನಿ ಎತ್ತಿದ್ದಾರೆ.

    ಪ್ರವಾಹ ಪೀಡಿತರ ಪರ

ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದ್ದು, 75ಕ್ಕೂ ಹೆಚ್ಚು ಜನ ಈಗಾಗಲೇ ನಿಧನ ಹೊಂದಿದ್ದಾರೆ.

 75ಕ್ಕೂ ಹೆಚ್ಚು ಜನ ನಿಧನ

ಮುಳುಗುತ್ತಿರುವ ಅಸ್ಸಾಂನ ಜನರಿಗೆ ಭಾರತೀಯರು ಸಹಾಯ ಮಾಡಬೇಕು ಎಂದು ಆಲಿಯಾ ಭಟ್ ಹೇಳಿದ್ದಾರೆ.

  ಮುಳುಗುತ್ತಿರುವ ಅಸ್ಸಾಂ

ಅಸ್ಸಾಂ ಜನರು ಪ್ರತಿ ವರ್ಷವೂ ಪ್ರವಾಹಕ್ಕೆ ತುತ್ತಾಗುತ್ತಿದ್ದಾರೆ, ಆದರೂ ಈ ಸಮಸ್ಯೆ ಬಗೆಹರಿದಿಲ್ಲ ಎಂದಿದ್ದಾರೆ ನಟಿ ಆಲಿಯಾ.

     ಸಮಸ್ಯೆ ಬಗೆಹರಿದಿಲ್ಲ

ಸಾಕಷ್ಟು ಜನ ಅಸು ನೀಗಿದ್ದಾರೆ, ಪ್ರಾಣಿ ಪಕ್ಷಿಗಳ ಜೀವ ಹಾನಿ ಆಗಿದೆ. ಸರ್ಕಾರವು ಈ ಕೂಡಲೇ ಸಹಾಯ ಒದಗಿಸಬೇಕು ಎಂದು ಆಲಿಯಾ ಆಗ್ರಹಿಸಿದ್ದಾರೆ.

       ಜೀವ ಹಾನಿ ಆಗಿದೆ

ಆಲಿಯಾ ಭಟ್ ಅವರ ಮಾನವೀಯ ಮನವಿಗೆ ನೆಟ್ಟಿಗರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮಾನವೀಯ ಮನವಿ