ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್ ನಟಿ ಆಲಿಯಾ ಭಟ್

04 SEP 2026

By  Manjunatha

ಆಲಿಯಾ ಭಟ್, ಬಾಲಿವುಡ್​​ನ ಸೂಪರ್ ಸ್ಟಾರ್ ನಟಿ, ಬಾಲಿವುಡ್​​ನ ಪ್ರಸ್ತುತ ನಂಬರ್ 1 ನಟಿ ಸಹ ಅವರು.

     ಸೂಪರ್ ಸ್ಟಾರ್ ನಟಿ

ಆಲಿಯಾ ಭಟ್ ಕೇವಲ ಒಂದು ದಕ್ಷಿಣ ಭಾರತದ ಸಿನಿಮಾನಲ್ಲಿ ನಟಿಸಿದ್ದಾರೆ. ಅದುವೇ ರಾಜಮೌಳಿಯ ‘ಆರ್​​ಆರ್​​ಆರ್’.

   ರಾಜಮೌಳಿಯ ಸಿನಿಮಾ

‘ಆರ್​​ಆರ್​​ಆರ್​’ನಲ್ಲಿ ಆಲಿಯಾ, ಜೂ ಎನ್​​ಟಿಆರ್ ಮತ್ತು ರಾಮ್ ಚರಣ್ ಅವರುಗಳ ಜೊತೆಗೆ ನಟನೆ ಮಾಡಿದ್ದರು.

‘     RRR​’ನಲ್ಲಿ ಆಲಿಯಾ

ಇದೀಗ ಮತ್ತೊಮ್ಮೆ ಆಲಿಯಾ ಭಟ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಪವರ್ ಫುಲ್ ಪಾತ್ರಕ್ಕಾಗಿ.

  ದಕ್ಷಿಣ ಭಾರತ ಚಿತ್ರರಂಗ

ಜೂ ಎನ್​ಟಿಆರ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ಆಲಿಯಾ ನಟಿಸಲಿದ್ದಾರೆ.

  ‘ಡ್ರ್ಯಾಗನ್’ ಸಿನಿಮಾನಲ್ಲಿ

ಈ ಸಿನಿಮಾದ ಪವನ್ ಫುಲ್ ಆಗಿರುವ ಅತಿಥಿ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅತಿಥಿ ಪಾತ್ರದಲ್ಲಿ ಆಲಿಯಾ

‘ಡ್ರ್ಯಾಗನ್’ ಸಿನಿಮಾನಲ್ಲಿ ಆಲಿಯಾ ಭಟ್ ಮಾತ್ರವೇ ಅಲ್ಲದೆ ನಟ ಶಾಹಿದ್ ಕಪೂರ್ ಸಹ ನಟಿಸಲಿದ್ದಾರೆ.

    ನಟ ಶಾಹಿದ್ ಕಪೂರ್

‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುವ ಮೂಲಕ ಆಲಿಯಾ ಭಟ್ ಎರಡನೇ ಬಾರಿ ಜೂ ಎನ್​​ಟಿಆರ್ ಜೊತೆ ನಟಿಸುತ್ತಿದ್ದಾರೆ.

      ‘ಡ್ರ್ಯಾಗನ್’ ಸಿನಿಮಾ