Pic credit - Instagram

Author: Shreelaxmi H

29 Aug 2025

ಬಣ್ಣ ಬಣ್ಣ ಡ್ರೆಸ್​ನಲ್ಲಿ ಮಿಂಚಿದ ಅಮೂಲ್ಯ

ಅಮೂಲ್ಯ

ನಟಿ ಅಮೂಲ್ಯ ಅವರು ಹಬ್ಬದ ಸಂದರ್ಭದಲ್ಲಿ ಬಣ್ಣ ಬಣ್ಣದ ಡ್ರೆಸ್​ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ ಅನ್ನೋದು ವಿಶೇಷ. ಈ ಫೋಟೋಗಳು ವೈರಲ್ ಆಗಿವೆ.

ಕನ್ನಡದ ನಟಿ

ಅಮೂಲ್ಯ ಅವರು ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷ ನಟಿಸಿ ಮದುವೆ ಬಳಿಕ ನಟನೆಯಿಂದ ಅವರು ದೂರವೇ ಉಳಿದುಕೊಂಡಿದ್ದಾರೆ.

ಕಿರುತೆರೆಗೆ ಕಂಬ್ಯಾಕ್

ಹಿರಿತೆರೆ ಬಳಿಕ ಈಗ ಅಮೂಲ್ಯ ಅವರು ಕಿರುತೆರೆಗೆ ಮರಳಿದ್ದಾರೆ ಅನ್ನೋದು ವಿಶೇಷ. ಅದು ರಿಯಾಲಿಟಿ ಶೋಗೆ ಜಡ್ಜ್​ ಆಗಿ.

ನಾವು ನಮ್ಮವರು

ನಾವು ನಮ್ಮವರು ಹೆಸರಿನ ರಿಯಾಲಿಟಿ ಶೋಗೆ ಅಮೂಲ್ಯ ಅವರು ಜಡ್ಜ್ ಆಗಿದ್ದಾರೆ. ಇವರ ಜೊತೆ ತಾರಾ ಹಾಗೂ ಶರಣ್ ಇದ್ದಾರೆ.

ಮಕ್ಕಳ ನೋಡಿಕೊಳ್ಳಬೇಕು

ಅಮೂಲ್ಯಗೆ ಅವಳಿ ಮಕ್ಕಳು. ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ.

ಖುಷಿ

ನಟಿ ಅಮೂಲ್ಯ ಅವರು ಕಿರುತೆರೆಗೆ ಮರಳಿರೋದು ಅವರ ಅಭಿಮಾನಿಗಳ ಪಾಲಿಗೆ ಸಾಕಷ್ಟು ಖುಷಿಯನ್ನು ಕೊಟ್ಟಿದೆ ಎಂದೇ ಹೇಳಬಹುದು.

ದೊಡ್ಡ ಪರದೆಗೆ

ಅಮೂಲ್ಯ ಅವರು ಮತ್ತೆ ದೊಡ್ಡ ಪರದೆಯಲ್ಲಿ ಯಾವಾಗ ನಟನೆ ಮಾಡುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ.

ಆ್ಯಕ್ಟೀವ್

ಅಮೂಲ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಅಭಿಮಾನಿಗಳಿಗಾಗಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.