ಸೋಲಿನ ಬಳಿಕ ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ ನಟಿ ಅನನ್ಯಾ ಪಾಂಡೆ

09 May 2025

By  Manjunatha

ಅನನ್ಯಾ ಪಾಂಡೆ ಬಾಲಿವುಡ್​ನ ಬಲು ಅದೃಷ್ಟದ ನಟಿ, ಅಂದ ಮತ್ತು ಪ್ರಭಾವದಿಂದ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

    ನಟಿ ಅನನ್ಯಾ ಪಾಂಡೆ

ಕರಣ್ ಜೋಹರ್ ಪ್ರಭಾವದಿಂದಲೇ ಅನನ್ಯಾ ಪಾಂಡೆಗೆ ಬಾಲಿವುಡ್​ ನಲ್ಲಿ ಅವಕಾಶ ಸಿಗುತ್ತಿವೆ ಎನ್ನಲಾಗುತ್ತಿದೆ.

ಕರಣ್ ಜೋಹರ್ ಪ್ರಭಾವ

ಆದರೆ ಈಗ ಅದೂ ಸಹ ಕಡಿಮೆ ಆಗಿದೆ. ಅನನ್ಯಾ ಪಾಂಡೆ ಕೈಯಲ್ಲಿ ಈಗ ಕೇವಲ ಒಂದೇ ಒಂದು ಸಿನಿಮಾ ಇದೆ.

   ಒಂದೇ ಒಂದು ಸಿನಿಮಾ

ಇದೀಗ ಅನನ್ಯಾ ಪಾಂಡೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡುವ ನಿರ್ಣಯ ಮಾಡಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ಈ ಹಿಂದೆ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲಿ ಅನನ್ಯಾ ನಟಿಸಿದ್ದರು. ಅದು ಫ್ಲಾಪ್ ಆಗಿತ್ತು.

    ‘ಲೈಗರ್’ ಸಿನಿಮಾದಲ್ಲಿ

ಆದರೆ ಈಗ ಬಾಲಿವುಡ್​ನಲ್ಲಿ ಅವಕಾಶಗಳ ಕೊರತೆ ಶುರುವಾಗುತ್ತಿದ್ದಂತೆ ದಕ್ಷಿಣ ಭಾರತ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.

      ಅವಕಾಶಗಳ ಕೊರತೆ

ತೆಲುಗಿನ ನಟ ಅಕ್ಕಿನೇನಿ ನಿಖಿಲ್ ನಟನೆಯ ಹೊಸ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಲಿದ್ದಾರಂತೆ.

  ಅಕ್ಕಿನೇನಿ ನಿಖಿಲ್ ಜೊತೆ

ಅಂದಹಾಗೆ ಅನನ್ಯಾ ಪಾಂಡೆ ಪ್ರಸ್ತುತ ‘ಚಾಂದ್ ಮೇರಾ ದಿಲ್’ ಹೆಸರಿನ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

     ಚಾಂದ್ ಮೇರಾ ದಿಲ್