Pic credit - Instagram

Author: Rajesh Duggumane

17 July 2025

ಆ್ಯಂಕರ್ ಅನುಶ್ರೀ ಕಲ್ಯಾಣವಂತೆ; ವರನ್ಯಾರು ಗೊತ್ತೇನೆ ಓ ಕೋಗಿಲೆ?

ಆ್ಯಂಕರ್ ಅನುಶ್ರೀ 

ಆ್ಯಂಕರ್ ಅನುಶ್ರೀಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಫ್ಯಾನ್ಸ್ ಅಚ್ಚರಿಗೆ ಕಾರಣ ಆಗಿದೆ. 

ಆಗಸ್ಟ್​​ನಲ್ಲಿ 

ಆಗಸ್ಟ್ 28ರಂದು ಅನುಶ್ರೀ ವಿವಾಹ ನೆರವೇರಲಿದೆ ಎಂದು ವರದಿಗಳು ಹೇಳುತ್ತಿವೆ. ಇನ್ನು 40 ದಿನಕ್ಕೆ ಅನುಶ್ರೀ ವಿವಾಹ ಪೂರ್ಣಗೊಳ್ಳಲಿದೆ. 

ವರನ್ಯಾರು?

ಕೊಡಗಿನ ಹಿನ್ನೆಲೆ ಹೊಂದಿರೋ ರೋಷನ್ ಎಂಬುವವರ ಜೊತೆ ಈ ಮದುವೆ ನಡೆಯುತ್ತಿದೆ. ಇದು ಫ್ಯಾನ್ಸ್ ಪಾಲಿಗೆ ನಿಜಕ್ಕೂ ಖುಷಿಯ ವಿಚಾರ. 

ಅರೇಂಜ್ ಮ್ಯಾರೇಜ್ 

ಅನುಶ್ರೀ ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಅವರು ಮನೆಯಲ್ಲಿ ನೋಡಿದ ಹುಡುಗನ ವಿವಾಹ ಆಗುತ್ತಿದ್ದಾರಂತೆ. 

ಮೊದಲೇ ಹೇಳಿದ್ರು.. 

ಈ ವರ್ಷವೇ ವಿವಾಹ ಆಗುತ್ತೇನೆ ಎಂದು ಅನುಶ್ರೀ ಅವರು ಈ ಮೊದಲೇ ಹೇಳಿದ್ದರು. ಈಗ ವರ್ಷದ ಮಧ್ಯದಲ್ಲಿ ಅವರ ಮದುವೆ ನಡೆಯುತ್ತಿದೆ. 

ಎಲ್ಲದಕ್ಕೂ ಅವರೇ ಬೇಕು..

ದೊಡ್ಡ ಈವೆಂಟ್, ರಿಯಾಲಿಟಿ ಶೋಗಳಿಗೆ ಆ್ಯಂಕರಿಂಗ್ ಮಾಡಲು ಅನುಶ್ರೀ ಅವರೇ ಬೇಕು. ಬಂದ ಆಫರ್ ನ ಅವರು ಒಪ್ಪಿ ಮಾಡುತ್ತಾರೆ. 

ನಟನೆ..

ಅನುಶ್ರೀ ಅವರು ನಟನೆಯ ಮೂಲಕವೂ ಎಲ್ಲರ ಗಮನ ಸೆಳೆದವರು. ಈಗ ಅವರು ಆ್ಯಂಕರಿಂಗ್​ನ ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 

ಮಂಗಳೂರು ಮೂಲ

ಅನುಶ್ರೀ ಅವರು ಮಂಗಳೂರು ಮೂಲದವರು. ಅವರು ಈಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ.