ಎಂಟು ವರ್ಷಗಳ ಬಳಿಕ ಒಂದಾಗುತ್ತಿರುವ ಟಾಲಿವುಡ್​ನ ಸ್ಟಾರ್ ಜೋಡಿ

06 May 2025

By  Manjunatha

ತೆಲುಗು ಚಿತ್ರರಂಗದ ಹೊಸ ತಲೆಮಾರಿನ ಸ್ಟಾರ್ ಜೋಡಿ ಎಂದರೆ ಅದು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ.

ಪ್ರಭಾಸ್ - ಅನುಷ್ಕಾ ಶೆಟ್ಟಿ

‘ಬಾಹುಬಲಿ 2’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗಲೂ ಅವರು ನಟಿಸುವುದು ಕಡಿಮೆ.

   ‘ಬಾಹುಬಲಿ 2’ ಸಿನಿಮಾ

ಆದರೆ ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ಅನುಷ್ಕಾ ಶೆಟ್ಟಿ ತೊಡಗಿಕೊಂಡಿದ್ದು, ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದಾರೆ.

    ಅನುಷ್ಕಾ ಶೆಟ್ಟಿ ಬ್ಯುಸಿ

ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ನಟ ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಎಂಟು ವರ್ಷಗಳ ಬಳಿಕ

‘ಬಾಹುಬಲಿ 2’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಯಾವ ಸಿನಿಮಾದಲ್ಲೂ ನಟಿಸಿಲ್ಲ.

ಅನುಷ್ಕಾ ಶೆಟ್ಟಿ - ಪ್ರಭಾಸ್

ಈಗ ಪ್ರಭಾಸ್ ನಟಿಸುತ್ತಿರುವ ‘ಸ್ಪಿರಿಟ್’ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ‘ಸ್ಪಿರಿಟ್’ ಸಿನಿಮಾನಲ್ಲಿ

ಸಿನಿಮಾದ ಮುಖ್ಯ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದು, ಎರಡನೇ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರಂತೆ.

     ದೀಪಿಕಾ ಪಡುಕೋಣೆ

‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಇದೇ ವರ್ಷಾಂತ್ಯದಲ್ಲಿ ಪ್ರಾರಂಭ ಆಗಲಿದೆ. ನಿರ್ದೇಶನ ಮಾಡುತ್ತಿರುವುದು ಸಂದೀಪ್ ರೆಡ್ಡಿ ವಂಗಾ.

    ಸಂದೀಪ್ ರೆಡ್ಡಿ ವಂಗಾ