ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

05 June 2025

By  Manjunatha

ಅನುಷ್ಕಾ ಶೆಟ್ಟಿ ದಕ್ಷಿಣ ಭಾರತ ಚಿತ್ರರಂಗದವನ್ನು ಆಳಿದ ನಟಿ, ತೆಲುಗು ಚಿತ್ರರಂಗದಲ್ಲಿ ಅವರ ಛಾಪು ದೊಡ್ಡದು.

      ನಟಿ ಅನುಷ್ಕಾ ಶೆಟ್ಟಿ

ದಶಕಗಳ ಸಮಯ ಅವರು ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಆದರೆ ಕೆಲ ವರ್ಷ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

    ಚಿತ್ರರಂಗದ ನಂಬರ್ 1

ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಅನುಷ್ಕಾ ಶೆಟ್ಟಿ ಕೆಲ ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದಾರೆ.

 ಚಿತ್ರರಂಗಕ್ಕೆ ಕಮ್ ಬ್ಯಾಕ್

ಈ ಹಿಂದೆ ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ ಸಿನಿಮಾನಲ್ಲಿ ನಟಿಸಿದ್ದರು, ಸಿನಿಮಾ ಸೂಪರ್ ಹಿಟ್ ಆಗಿತ್ತು.

ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ

ಇದೀಗ ‘ಘಾಟಿ’ ಹೆಸರಿನ ಪಕ್ಕಾ ಆಕ್ಷನ್ ಮತ್ತು ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಸಿನಿಮಾನಲ್ಲಿ ಅನುಷ್ಕಾ ನಟಿಸಿದ್ದಾರೆ.

    ಆಕ್ಷನ್ ಮತ್ತು ಥ್ರಿಲ್ಲರ್

ಸಿನಿಮಾದ ಟೀಸರ್​ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ಅನುಷ್ಕಾರ ವೈಯಲೆಂಟ್ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿದೆ.

   ವೈಯಲೆಂಟ್ ಅನುಷ್ಕಾ

ಅನುಷ್ಕಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಘಾಟಿ’ ಸಿನಿಮಾ ಜುಲೈ 11 ರಂದು ಬಿಡುಗಡೆ ಆಗಲಿದೆ.

ಜುಲೈ 11 ರಂದು ಬಿಡುಗಡೆ

ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಅನುಷ್ಕಾ ಜೊತೆಗೆ ಇದು ಅವರ ಎರಡನೇ ಸಿನಿಮಾ.

         ಕ್ರಿಶ್ ನಿರ್ದೇಶನ