ದಶಕದ ಬಳಿಕ ತಮಿಳು ಚಿತ್ರರಂಗಕ್ಕೆ ಮರಳುತ್ತಿರುವ ಅನುಷ್ಕಾ ಶೆಟ್ಟಿ

27 June 2025

By  Manjunatha

ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ ಮಿಂಚಿದ್ದು ಮಾತ್ರ ನೆರೆಯ ತೆಲುಗು ಚಿತ್ರರಂಗದಲ್ಲಿ.

 ಕರ್ನಾಟಕ ಮೂಲದ ನಟಿ

ಒಂದು ದಶಕಕ್ಕೂ ಹೆಚ್ಚು ಕಾಲ ಅನುಷ್ಕಾ ಶೆಟ್ಟಿ, ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದರು.

  ಚಿತ್ರರಂಗದ ಟಾಪ್ ನಟಿ

ತೆಲುಗಿನ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ, ಅತ್ಯುತ್ತಮ ಪಾತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ.

ಅತ್ಯುತ್ತಮ ಸಿನಿಮಾಗಳಲ್ಲಿಗೆ

ಆದರೆ ‘ಬಾಹುಬಲಿ’ ಸಿನಿಮಾದ ಬಳಿಕ ಯಾಕೋ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ತುಸು ದೂರಾದರು.

     ‘ಬಾಹುಬಲಿ’ ಸಿನಿಮಾ

ಬಹಳ ವರ್ಷಗಳ ಬಳಿಕ ಈಗ ಮತ್ತೆ ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಸಕ್ರಿಯರಾಗಿದ್ದು, ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಸಿನಿಮಾಗಳಲ್ಲಿ ಸಕ್ರಿಯ

ಕಾರ್ತಿ ನಟನೆಯ ‘ಖೈದಿ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಈಗ ಅದರ ಎರಡನೇ ಭಾಗ ಬರುತ್ತಿದೆ.

  ಕಾರ್ತಿ ನಟನೆಯ ‘ಖೈದಿ’

‘ಖೈದಿ’ ಸಿನಿಮಾನಲ್ಲಿ ನಾಯಕಿಯೇ ಇರಲಿಲ್ಲ. ಹಾಡುಗಳೂ ಇರಲಿಲ್ಲ, ಆದರೆ ‘ಖೈದಿ 2’ನಲ್ಲಿ ಅನುಷ್ಕಾ ಶೆಟ್ಟಿ ನಾಯಕಿ.

  ಅನುಷ್ಕಾ ಶೆಟ್ಟಿ ನಾಯಕಿ

ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ನಟ ಕಾರ್ತಿ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

   ಕಾರ್ತಿ ಜೊತೆಗೆ ನಾಯಕಿ

ಅನುಷ್ಕಾ ಶೆಟ್ಟಿ ಪ್ರಸ್ತುತ ತೆಲುಗಿನ ‘ಘಾಟಿ’ ಹಾಗೂ ಮಲಯಾಳಂನ ‘ಖಾತರ್’ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಎರಡು ಸಿನಿಮಾನಲ್ಲಿ ನಟನೆ