‘ಬಾಹುಬಲಿ’ ರೀ ರಿಲೀಸ್ ತಮನ್ನಾ ಅಭಿಮಾನಿಗಳಿಗೆ ಮತ್ತೆ ಬೇಸರ

31 OCT 2025

By  Manjunatha

‘ಬಾಹುಬಲಿ 1 ಮತ್ತು 2’ ಸಿನಿಮಾಗಳ ಮಿಶ್ರಣ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಇಂದು ಮರು ಬಿಡುಗಡೆ ಆಗಿದೆ. 

    ಬಾಹುಬಲಿ: ದಿ ಎಪಿಕ್

ಸಾಕಷ್ಟು ದೃಶ್ಯಗಳನ್ನು ಕತ್ತರಿಸಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು 3:43 ಗಂಟೆಗೆ ಇಳಿಸಲಾಗಿದೆ.

3:43 ಗಂಟೆಗೆ ಇಳಿಸಲಾಗಿದೆ

ಈ ಪ್ರಕ್ರಿಯೆಯಲ್ಲಿ ತಮನ್ನಾ ಭಾಟಿಯಾ ಅವರ ಹಾಡಿಗೂ ಕತ್ತರಿ ಹಾಕಲಾಗಿದೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

     ತಮನ್ನಾ ಭಾಟಿಯಾ

‘ಬಾಹುಬಲಿ 1’ನಲ್ಲಿ ತಮನ್ನಾ ಭಾಟಿಯಾ ನಾಯಕಿ, ಅವರ ಎರಡು ಹಾಡುಗಳು ಸಿನಿಮಾನಲ್ಲಿ ಇದ್ದವು.

ತಮನ್ನಾ ಭಾಟಿಯಾ ಹಾಡು

ಆದರೆ ಮೊದಲ ಹಾಡನ್ನು ಉಳಿಸಿಕೊಂಡಿರುವ ರಾಜಮೌಳಿ ತಮನ್ನಾರ ಎರಡನೇ ಹಾಡನ್ನು ಕಿತ್ತು ತೆಗೆದಿದ್ದಾರೆ.

       ಒಂದು ಹಾಡು ಇದೆ

ಇದು ತಮನ್ನಾ ಅಭಿಮಾನಿಗಳಿಗೆ ತುಸು ಬೇಸರ ತಂದಿದೆ. ಮಾತ್ರವಲ್ಲದೆ, ಕೆಲ ದೃಶ್ಯಗಳಿಗೂ ಕತ್ತರಿ ಹಾಕಲಾಗಿದೆ.

  ಅಭಿಮಾನಿಗಳಿಗೆ  ಬೇಸರ

ಇತ್ತೀಚೆಗೆ ಬಿಡುಗಡೆ ಆದ ‘ಬ್ಯಾಡ್ಸ್ ಆಫ್ ಬಾಲಿವುಡ್​’ನಲ್ಲೂ ಸಹ ತಮನ್ನಾ ಹಾಡಿಗೆ ಕತ್ತರಿ ಹಾಕಲಾಗಿತ್ತು.

  ಬ್ಯಾಡ್ಸ್ ಆಫ್ ಬಾಲಿವುಡ್

ಈಗ ‘ಬಾಹುಬಲಿ: ದಿ ಎಪಿಕ್’ ಸಿನಿಮಾನಲ್ಲಿಯೂ ತಮನ್ನಾ ಭಾಟಿಯಾ ಹಾಡಿಗೆ ಕತ್ತರಿ ಹಾಕಲಾಗಿದೆ.

ಹಾಡಿಗೆ ಕತ್ತರಿ ಹಾಕಲಾಗಿದೆ