ಶಿಲ್ಪಾ ಶೆಟ್ಟಿ ವಿರುದ್ಧ ಬೆಂಗಳೂರು ಪೊಲೀಸರ ಎಫ್​​ಐಆರ್: ನಡೆದಿದ್ದೇನು?

17DEC 2025

By  Manjunatha

ಶಿಲ್ಪಾ ಶೆಟ್ಟಿ ಮಂಗಳೂರು ಮೂಲದವರು ಆದರೆ ಮಿಂಚುತ್ತಿರುವುದು ಬಾಲಿವುಡ್​ ನಟಿಯಾಗಿ.

ಮಂಗಳೂರು ಮೂಲದ ನಟಿ

ಬಾಲಿವುಡ್​ನ ಈ ಬೆಡಗಿ ಕಳೆದ ನಾಲ್ಕೈದು ವರ್ಷಗಳಿಂದ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ.

   ಸತತ ವಿವಾದದಲ್ಲಿ ನಟಿ

ಉದ್ಯಮಿಯೂ ಆಗಿರುವ ಶಿಲ್ಪಾ ಶೆಟ್ಟಿಯ ವಿರುದ್ಧ ಆರ್ಥಿಕ ಕಾರಣಗಳಿಗೆ ದೂರು ದಾಖಲಾಗುತ್ತಲೇ ಇವೆ.

   ದೂರು ದಾಖಲಾಗುತ್ತಿವೆ

ಇದೀಗ ಬೆಂಗಳೂರಿನ ಪೊಲೀಸರು ಸಹ ಶಿಲ್ಪಾ ಶೆಟ್ಟಿಗೆ ಸೇರಿದ ಐಶಾರಾಮಿ ರೆಸ್ಟೊರೆಂಟ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

 ಐಶಾರಾಮಿ ರೆಸ್ಟೊರೆಂಟ್

ಶಿಲ್ಪಾ ಒಡೆತನದ ಬಾಸ್ಟಿಯನ್ ರೆಸ್ಟೊರೆಂಟ್ ಬೆಂಗಳೂರಿನಲ್ಲಿಯೂ ಇದ್ದು, ಈ ರೆಸ್ಟೊರೆಂಟ್ ನಿಯಮ ಮುರಿದಿದೆ ಎಂದು ದೂರು ದಾಖಲಿಸಿಕೊಳ್ಳಲಾಗಿದೆ.

 ಬಾಸ್ಟಿಯನ್ ರೆಸ್ಟೊರೆಂಟ್

ಅವಧಿ ಮುಗಿದ ಬಳಿಕವೂ ಗ್ರಾಹಕರಿಗೆ ಸೇವೆಗಳನ್ನು ಒದಗಿಸಿದ್ದಾರೆಂದು ಆರೋಪಿಸಿ ಬೆಂಗಳೂರು ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

   ಬೆಂಗಳೂರು ಪೊಲೀಸರು

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟಿ, ಆರೋಪಗಳು ಆಧಾರವಿಲ್ಲದ್ದು ಎಂದಿದ್ದಾರೆ. ಅಲ್ಲದೆ ನ್ಯಾಯ ಸಿಗಲಿದೆ ಎಂದಿದ್ದಾರೆ.

 ಆರೋಪ ಆಧಾರವಿಲ್ಲದ್ದು

ಈಗಾಗಲೇ ನಟಿ ಶಿಲ್ಪಾ ಶೆಟ್ಟಿ ಮೇಲೆ ಹಣಕಾಸು ವಂಚನೆ, ತೆರಿಗೆ ವಂಚನೆ ಪ್ರಕರಣಗಳು ಜಾರಿಯಲ್ಲಿವೆ.

       ಹಣಕಾಸು ವಂಚನೆ