ನಟಿ ಭಾಗ್ಯಶ್ರೀ ಬೋರ್ಸೆಗೆ ಅವಕಾಶಗಳ ಸುರಿಮಳೆ, ಕಾರಣ ಶ್ರೀಲೀಲಾ?

04 SEP 2025

By  Manjunatha

ಶ್ರೀಲೀಲಾ ಟಾಲಿವುಡ್​ನ ಸ್ಟಾರ್ ನಟಿಯಾಗಿದ್ದರು, ಆದರೆ ಈಗ ಅವರು ಬಾಲಿವುಡ್​ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.

 ಟಾಲಿವುಡ್​ನ ಸ್ಟಾರ್ ನಟಿ

ಶ್ರೀಲೀಲಾ ಕೈಬಿಟ್ಟ ಸಿನಿಮಾಗಳು ಈಗ ಭಾಗ್ಯಶ್ರೀ ಬೋರ್ಸೆಗೆ ಸಿಗುತ್ತಿದ್ದು, ಒಂದರ ಹಿಂದೊಂದು ಅವಕಾಶ ಬಾಚಿಕೊಳ್ಳುತ್ತಿದ್ದಾರೆ.

ಶ್ರೀಲೀಲಾ ಕೈಬಿಟ್ಟ ಸಿನಿಮಾ

ಶ್ರೀಲೀಲಾ ಕೈಬಿಟ್ಟ ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ನಾಯಕಿಯಾಗಿ ನಟಿಸಿದರು.

  ‘ಕಿಂಗ್ಡಮ್’ ಸಿನಿಮಾನಲ್ಲಿ

ಬಳಿಕ ಶ್ರೀಲೀಲಾ ಮೊದಲು ಆಯ್ಕೆ ಆಗಿದ್ದ ಅಖಿಲ್ ಅಕ್ಕಿನೇನಿಯ ಹೊಸ ಸಿನಿಮಾ ಲೆನಿನ್ ಸಿನಿಮಾಕ್ಕೂ ಭಾಗ್ಯಶ್ರೀ ನಾಯಕಿ.

ಅಖಿಲ್ ಅಕ್ಕಿನೇನಿ ಸಿನಿಮಾ

ಇವುಗಳ ಜೊತೆಗೆ ಇನ್ನೂ ಕೆಲವು ಹೊಸ ತೆಲುಗು ಸಿನಿಮಾಗಳು ಭಾಗ್ಯಶ್ರೀ ಬೋರ್ಸೆ ಕೈ ಸೇರುತ್ತಿವೆ.

  ಭಾಗ್ಯಶ್ರೀ ಬೋರ್ಸೆ ಕೈಗೆ

ರಾಮ್ ಪೋತಿನೇನಿ ನಟಿಸಲಿರುವ ಹೊಸ ಸಿನಿಮಾಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿಯಂತೆ.

 ರಾಮ್ ಪೋತಿನೇನಿ ಜೊತೆ

ಅದರ ಜೊತೆಗೆ ಖ್ಯಾತ ನಟ ದುಲ್ಕರ್ ನಟಿಸಿ, ರಾಣಾ ದಗ್ಗುಬಾಟಿ ನಿರ್ಮಿಸುತ್ತಿರುವ ‘ಕಾಂತಾ’ ಸಿನಿಮಾಕ್ಕೂ ಭಾಗ್ಯಶ್ರೀ ನಾಯಕಿ.

‘ಕಾಂತಾ’ ಸಿನಿಮಾ ನಾಯಕಿ

ಶ್ರೀಲೀಲಾ ಬಾಲಿವುಡ್​ಗೆ ಹೋಗಿದ್ದರಿಂದಲೇ ಭಾಗ್ಯಶ್ರೀ ಬೋರ್ಸೆಯ ಅದೃಷ್ಟ ಖುಲಾಯಿಸಿರುವಂತಿದೆ.

   ಅದೃಷ್ಟ ಖುಲಾಯಿಸಿದೆ