ಬಲು ವೇಗವಾಗಿ ಮುನ್ನುಗ್ಗುತ್ತಿದ್ದಾರೆ ನಟಿ ಭಾಗ್ಯಶ್ರೀ ಬೋರ್ಸೆ, ಯಾರೀಕೆ?

19 July 2025

By  Manjunatha

ಭಾಗ್ಯಶ್ರೀ ಬೋರ್ಸೆ, ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಬಲು ಜೋರಾಗಿ ಕೇಳಿ ಬರುತ್ತಿರುವ ಹೆಸರು.

  ನಟಿ ಭಾಗ್ಯಶ್ರೀ ಬೋರ್ಸೆ

ಮುದ್ದು ಮುಖ, ಸೆಳೆವ ಕಂಗಳನ್ನು ಹೊಂದಿರುವ ಈ ಚೆಲುವೆ ಒಂದರ ಹಿಂದೊಂದು ತೆಲುಗು ಸಿನಿಮಾಕ್ಕೆ ಸಹಿ ಮಾಡುತ್ತಿದ್ದಾರೆ.

    ಮುದ್ದು ಮುಖದ ನಟಿ

ಶ್ರೀಲೀಲಾ ತೆಲುಗಿನ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಆ ಸ್ಥಾನವನ್ನು ಕಿತ್ತುಕೊಳ್ಳುತ್ತಿದ್ದಾರೆ ಭಾಗ್ಯಶ್ರೀ ಬೋರ್ಸೆ.

  ಶ್ರೀಲೀಲಾ ಸ್ಥಾನಕ್ಕೆ ಕುತ್ತು

ಹಿಂದಿ ಸಿನಿಮಾ ಆಸೆಗಾಗಿ ಶ್ರೀಲೀಲಾ ಕೈಬಿಟ್ಟ ತೆಲುಗು ಸಿನಿಮಾಗಳೆಲ್ಲ ಈಗ ಭಾಗ್ಯಶ್ರೀ ಬೋರ್ಸೆ ಪಾಲಾಗುತ್ತಿವೆ.

  ಭಾಗ್ಯಶ್ರೀ  ಪಾಲಾಗುತ್ತಿವೆ

ಶ್ರೀಲೀಲಾ ನಾಯಕಿಯಾಗಿದ್ದ ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ.

  ‘ಕಿಂಗ್ಡಮ್’ ಸಿನಿಮಾನಲ್ಲಿ

ಶ್ರೀಲೀಲಾ ನಾಯಕಿ ಆಗಿದ್ದ ಅಖಿಲ್ ಅಕ್ಕಿನೇನಿ ಸಿನಿಮಾಕ್ಕೂ ಈಗ ಭಾಗ್ಯಶ್ರೀ ಅವರೇ ನಾಯಕಿ.

   ಅಖಿಲ್ ಅಕ್ಕಿನೇನಿ ಚಿತ್ರ

ಶ್ರೀಲೀಲಾ ಕೈಬಿಟ್ಟ ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಸಿನಿಮಾಕ್ಕೂ ಸಹ ಭಾಗ್ಯಶ್ರೀಯೇ ನಾಯಕಿ.

‘ಮಿಸ್ಟರ್ ಬಚ್ಚನ್’ ಸಿನಿಮಾ

ಮಹಾರಾಷ್ಟ್ರ ಮೂಲದ ಭಾಗ್ಯಶ್ರೀ ಬೋರ್ಸೆ, ತೆಲುಗು ಚಿತ್ರರಂಗದಲ್ಲಿ ಸೆಟಲ್ ಆಗುವ ಉದ್ದೇಶ ಹೊಂದಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ