ತೆಲುಗು ಸಿನಿಮಾ ರಂಗಕ್ಕೆ ‘ಭಜರಂಗಿ ಬಾಯಿಜಾನ್’ನ ಬಾಲಕಿ ಎಂಟ್ರಿ, ಸಿನಿಮಾ ಯಾವುದು?

03 July 2025

By  Manjunatha

ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಬಾಯಿಜಾನ್’ 2015 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು.

    ಭಜರಂಗಿ ಬಾಯಿಜಾನ್

ಭಾರತದಲ್ಲಿ ತಪ್ಪಿಸಿಕೊಂಡಿದ್ದ ಪಾಕಿಸ್ತಾನಿ ಬಾಲಕಿ ಮುನ್ನಿಯನ್ನು ಆಂಜನೇಯ ಭಕ್ತನೊಬ್ಬ ಪಾಕಿಸ್ತಾನಕ್ಕೆ ಸೇರಿಸುವ ಕತೆಯದು.

 ಪಾಕಿಸ್ತಾನಿ ಬಾಲಕಿ ಮುನ್ನಿ

ಸಿನಿಮಾನಲ್ಲಿ ಪಾಕಿಸ್ತಾನಿ ಬಾಲಕಿಯ ಪಾತ್ರದಲ್ಲಿ ನಟಿಸಿದ್ದು ಹರ್ಷಾಲಿ ಮಲ್ಹೋತ್ರಾ, ತಮ್ಮ ಕ್ಯೂಟ್​​ನೆಸ್​​ನಿಂದ ಗಮನ ಸೆಳೆದಿದ್ದರು.

ನಟಿ ಹರ್ಷಾಲಿ ಮಲ್ಹೋತ್ರಾ

ಆಗ ಬಾಲಕಿ ಆಗಿದ್ದ ಹರ್ಷಾಲಿ ಮಲ್ಹೋತ್ರಾ ಹತ್ತು ವರ್ಷದ ಬಳಿಕ ಈಗ ಯುವತಿ, ಬರೀ ಯುವತಿಯಲ್ಲ, ಮಾಡೆಲ್ ಮತ್ತು ನಟಿ.

ಆಗ ಬಾಲಕಿ, ಈಗ ಯುವತಿ

ಇದೀಗ ಹರ್ಷಾಲಿ ಮಲ್ಹೋತ್ರಾ, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯುವತಿಯಾಗಿ ಮೊದಲ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

      ತೆಲುಗು ಚಿತ್ರರಂಗಕ್ಕೆ

‘ಭಜರಂಗಿ ಬಾಯಿಜಾನ್’ ಬಳಿಕ ಯಾವ ಸಿನಿಮಾನಲ್ಲಿಯೂ ನಟಿಸದ ಹರ್ಷಾಲಿ, ಈಗ ತೆಲುಗಿನ ‘ಅಖಂಡ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.

 ‘ಅಖಂಡ 2’ ಸಿನಿಮಾನಲ್ಲಿ

ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾನಲ್ಲಿ ಹರ್ಷಾಲಿ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  ನಂದಮೂರಿ ಬಾಲಕೃಷ್ಣ

ಈ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ಹರ್ಷಾಲಿ ಪಾತ್ರವನ್ನು ದುಷ್ಟರಿಂದ ಕಾಪಾಡುವ ಕತೆಯಿದೆಯಂತೆ. ಸಿನಿಮಾನಲ್ಲಿ ನಟಿಯ ಪಾತ್ರ ಜನನಿ.

     ನಟಿಯ ಪಾತ್ರ ಜನನಿ