ಭೂಮಿ ಪೆಡ್ನೇಕರ್ ನಡೆಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು, ನಟಿ ಮಾಡಿದ್ದೇನು?

25 AUG 2026

By  Manjunatha

ಭೂಮಿ ಪಡ್ನೇಕರ್ ಜನಪ್ರಿಯ ಬಾಲಿವುಡ್ ನಟಿ, ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ.

  ನಟಿ ಭೂಮಿ ಪಡ್ನೇಕರ್

ಹಿಂದಿಯ ಕೆಲ ಸ್ಟಾರ್ ನಟರುಗಳೊಟ್ಟಿಗೆ ನಟಿಸಿರುವ ಭೂಮಿ ಪೆಡ್ನೇಕರ್, ತನ್ನ ನಟನೆಯಿಂದ ಗುರುತು ಪಡೆದುಕೊಂಡಿದ್ದಾರೆ.

  ಸ್ಟಾರ್ ನಟರುಗಳೊಟ್ಟಿಗೆ

ಇತ್ತೀಚೆಗಷ್ಟೆ, ಸಿಜೆಪಿ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರು.

  ಸಿಜೆಪಿ ಸದಸ್ಯರ ವಿರುದ್ಧ

ಈಗ ನಟಿ ಭೂಮಿ ಪಡ್ನೇಕರ್ ಮಾಡಿರುವ ಕೆಲಸಕ್ಕೆ ನೆಟ್ಟಿಗರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಾಡಿದ್ದಾರೆ.

   ನೆಟ್ಟಿಗರ ತೀವ್ರ ಮೆಚ್ಚುಗೆ

ಭೂಮಿ ಪಡ್ನೇಕರ್ ಇತ್ತೀಚೆಗಷ್ಟೆ ಸರ್ವೋತ್ತಮ್ ನಾಗರೀಕ ಸಮ್ಮಾನ್ 2026 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

      ನಾಗರೀಕ ಸಮ್ಮಾನ್

ಭೂಮಿ, ರೆಡ್ ಕಾರ್ಪೆಟ್​​ ಮೇಲೆ ಬರುತ್ತಿದ್ದಂತೆ ರಾಷ್ಟ್ರಗೀತೆ ನಟಿಯ ಕಿವಿಗೆ ಬಿತ್ತು, ಕೂಡಲೇ ನಟಿ ರೆಡ್ ಕಾರ್ಪೆಟ್ ಇಂದ ಕೆಳಗಿಳಿದರು.

   ಕಿವಿಗೆ ಬಿದ್ದ ರಾಷ್ಟ್ರಗೀತೆ

ರೆಡ್ ಕಾರ್ಪೆಟ್ ಇಂದ ಕೆಳಗಿಳಿದವರೇ ಪಕ್ಕದಲ್ಲಿ ಹೋಗಿ ಶಿಸ್ತಿನಿಂದ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.

     ರಾಷ್ಟ್ರಗೀತೆಗೆ ಗೌರವ

ನಟಿಯು ರಾಷ್ಟ್ರಗೀತೆಗೆ ಗೌರವ ಸೂಚಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

 ವಿಡಿಯೋ ಇದೀಗ ವೈರಲ್