ಬಿಗ್​​ಬಾಸ್​​ನ ಘಾಟಿ ಹುಡುಗರಿಗೆ ಖಡಕ್ ಆವಾಜ್ ಹೊಡೆದ ಆಸಿಯಾ

02 OCT 2026

By  Manjunatha

ಬಿಗ್​​ಬಾಸ್ ಕನ್ನಡ ಸೀಸನ್ 13 ಚಾಲ್ತಿಯಲ್ಲಿದೆ. ಮನೆಯಲ್ಲಿ ಒಂದರ ಹಿಂದೊಂದು ಜಗಳುಗಳು ನಡೆಯುತ್ತಲೇ ಇವೆ.

 ಬಿಗ್​​ಬಾಸ್ ಕನ್ನಡ ಸೀಸನ್

ಈ ಬಾರಿ ಬಿಗ್​​ಬಾಸ್ ಮನೆಯಲ್ಲಿ ‘ಅಗ್ನಿ’ ಬಾಯ್ಸ್ ಕ್ವಾಟಲೆ ಹೆಚ್ಚಾಗಿದೆ. ಅದರಲ್ಲೂ ಮಂಜ ಮತ್ತು ಲಿಖಿತ್ ಅತಿಯಾಗಿ ಆಡುತ್ತಿದ್ದಾರೆ.

   ‘ಅಗ್ನಿ’ ಬಾಯ್ಸ್ ಕ್ವಾಟಲೆ

ಆಸಿಯಾ ಫಿರ್ದೋಸಾ ಒಳ್ಳೆಯ ರೀತಿ ಆಟ ಆಡುತ್ತಿದ್ದು, ಎಲ್ಲರೊಟ್ಟಿಗೂ ಹೊಂದಿಕೊಂಡು, ಜೊತೆಗೆ ಆಟ ಆಡಿಕೊಂಡು ಹೋಗುತ್ತಿದ್ದಾರೆ.

ಆಸಿಯಾ ಫಿರ್ದೋಸಾ ಆಟ

ಮನೆಯ ಹಲವು ಸದಸ್ಯರಿಗೆ ಆಸಿಯಾ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ಇದೆ. ಆದರೆ ಇದೀಗ ಆಸಿಯಾ ಇಬ್ಬರಿಗೆ ಖಡತ್ ಆವಾಜ್ ಹೊಡೆದಿದ್ದಾರೆ.

 ಒಳ್ಳೆಯ ಅಭಿಪ್ರಾಯ ಇದೆ

ಮನೆಯಲ್ಲಿ ರೌಡಿಗಳಂತೆ ವರ್ತಿಸುವ ಮಂಜ ಮತ್ತು ಲಿಖಿತ್​​ಗೆ ಆಸಿಯಾ ಫಿರ್ದೋಸಾ ಖಡಕ್ ಆಗಿ ಆವಾಜ್ ಹೊಡೆದಿದ್ದಾರೆ.

     ಮಂಜ ಮತ್ತು ಲಿಖಿತ್​​

ಮಂಜ ಮತ್ತು ಲಿಖಿತ್ ಗೋಂಧಿ ಅವರುಗಳು ಆಸಿಯಾ ಅನ್ನು ಸುಖಾ ಸುಮ್ಮನೆ ರೇಗಿಸಿದ್ದಾರೆ. ಇದರಿಂದ ಆಸಿಯಾ ಸಿಟ್ಟಾಗಿದ್ದಾರೆ.

 ಸುಖಾ ಸುಮ್ಮನೆ ಉಪಟಳ

ನೇರವಾಗಿ ಲಿಖಿತ್​​ ಹಾಗೂ ಮಂಜನಿಗೆ ಆವಾಜ್ ಹೊಡೆದ ಆಸಿಯಾ, ಇಬ್ಬರಿಗೂ ಹೊಡೆದು ಹೊರಗೆ ಹೋಗ್ತೀನಿ ಎಂದಿದ್ದಾರೆ.

ಹೊಡೆದು ಹೊರ ಹೋಗ್ತೀನಿ

ಆಸಿಯಾ ಫಿರ್ದೋಸಾ ಅವರು ಆವಾಜ್ ಹೊಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಾಮಾಜಿಕ ಜಾಲತಾಣ