ವಿಚ್ಛೇದನದ ಬಗ್ಗೆ ಸುಳ್ಳು, ಬಿಗ್​​ಬಾಸ್ ಸ್ಪರ್ಧಿಯ ಮಾಜಿ ಪತಿ ಆರೋಪ

05 OCT 2025

By  Manjunatha

ನಿರೂಪಕಿ ಜಾಹ್ನವಿ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದು, ತಾವು ಪತಿಯೊಂದಿಗೆ ವಿಚ್ಛೇದನ ಪಡೆದಿರುವುದಾಗಿ ಹೇಳಿಕೊಂಡಿದ್ದರು.

      ನಿರೂಪಕಿ ಜಾಹ್ನವಿ

ಬಿಗ್​​ಬಾಸ್ ಮನೆಯಲ್ಲಿಯೂ ಈ ಬಗ್ಗೆ ಮಾತನಾಡಿ, ಪತಿಗೆ ಅಕ್ರಮ ಸಂಬಂಧ ಇತ್ತು ಹಾಗಾಗಿ ವಿಚ್ಛೇದನ ನೀಡಿದ್ದಾಗಿ ಅವರು ಹೇಳಿದ್ದರು.

      ವಿಚ್ಛೇದನಕ್ಕೆ ಕಾರಣ

ನನ್ನ ವಿಚ್ಛೇದನ ಆಗುವ ಮೊದಲೇ ನನ್ನ ಪತಿಗೆ ನನ್ನ ಗೆಳತಿಯೊಟ್ಟಿಗೆ ಸಂಬಂಧ ಇತ್ತು, ಅವರಿಗೆ ಮಗುವೂ ಆಗಿತ್ತು ಎಂದಿದ್ದರು ಜಾಹ್ನವಿ.

 ಗೆಳತಿಯೊಟ್ಟಿಗೆ ಸಂಬಂಧ

ಇದೀಗ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಜಾಹ್ನವಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಮಾಜಿ ಪತಿ ಕಾರ್ತಿಕ್

ಜಾಹ್ನವಿ ವಿಚ್ಛೇದನಕ್ಕೆ ನೀಡಿರುವ ಕಾರಣ ಸುಳ್ಳು, ವಿಚ್ಛೇದನವಾದ ಬಳಿಕ ನಾನು ಮದುವೆ ಆಗಿರುವುದು ಎಂದು ಅವರು ಹೇಳಿದ್ದಾರೆ. 

      ಆರೋಪ ನಿರಾಕರಣೆ

ಇದೀಗ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಮಾಜಿ ಪತ್ನಿಯ ಮೇಲೂ ಅಂಥಹುದೇ ಆರೋಪವನ್ನು ಮಾಡಿದ್ದಾರೆ.

      ಮಾಜಿ ಪತಿ ಕಾರ್ತಿಕ್

ಜಾಹ್ನವಿ ನನ್ನೊಟ್ಟಿಗೆ ಇರುವಾಗಲೇ ಪರ ಪುರುಷನೊಂದಿಗೆ ಸಲುಗೆಯಿಂದ ಇರುತ್ತಿದ್ದರು, ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು ಎಂದಿದ್ದಾರೆ.

  ಪುರುಷನೊಂದಿಗೆ ಸಲುಗೆ

ಜಾಹ್ನವಿ ಬಿಗ್​​ಬಾಸ್ ಮನೆಯಲ್ಲಿದ್ದು, ಕಳೆದ ವಾರ ಚೆನ್ನಾಗಿಯೇ ಆಟ ಆಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಫಿನಾಲೆ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

        ಫಿನಾಲೆ ಅಭ್ಯರ್ಥಿ