ಕತ್ರಿನಾ ಕೈಫ್​​ಗೆ ಬಾಡಿ ಶೇಮಿಂಗ್, ಬೆಂಬಲಕ್ಕೆ ಬಂದ ಸೆಲೆಬ್ರಿಟಿಗಳು

18 SEP 2026

By  Manjunatha

ಕತ್ರಿನಾ ಕೈಫ್ ಬಾಲಿವುಡ್​ನ ಸ್ಟಾರ್ ನಟಿ, ಆದರೆ ಕಳೆದ ಎರಡು ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಇದ್ದಾರೆ.

  ಬಾಲಿವುಡ್​ನ ಸ್ಟಾರ್ ನಟಿ

ಕಳೆದ ವರ್ಷವಷ್ಟೆ ಕತ್ರಿನಾ ಕೈಫ್ ಮುದ್ದಾದ ಗಂಡು ಮಗುವಿಗೆ ತಾಯಿ ಆಗಿದ್ದಾರೆ. ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

  ಗಂಡು ಮಗುವಿಗೆ ತಾಯಿ

ಕತ್ರಿನಾ ಕೈಫ್ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕಾಣಿಸಿಕೊಂಡಿದ್ದು, ಅವರನ್ನು ಟ್ರೋಲ್ ಮಾಡಲಾಗಿದೆ.

   ಕತ್ರಿನಾ ಕೈಫ್ ಬಹಿರಂಗ

ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ನಟಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದರು. ಮಗು ಆಗಿರುವ ಕಾರಣ ಸಹಜವಾಗಿಯೇ ತುಸು ದಪ್ಪ ಆಗಿದ್ದಾರೆ.

    ಗಣೇಶ ಚತುರ್ಥಿ ಪೂಜೆ

ಆದರೆ ಅವರ ದೇಹಾಕಾರವನ್ನೇ ಗುರಿಯಾಗಿರಿಸಿಕೊಂಡು ಹಲವಾರು ಮಂದಿ ಕತ್ರಿನಾ ಅವರನ್ನು ಟ್ರೋಲ್ ಮಾಡಿದ್ದಾರೆ.

    ಟ್ರೋಲ್ ಮಾಡಿದ್ದಾರೆ

ಆದರೆ ಅದರ ಬೆನ್ನಲ್ಲೆ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ಕತ್ರಿನಾ ಕೈಫ್ ಅವರಿಗೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಸೆಲೆಬ್ರಿಟಿಗಳು

ನಟಿ ರಮ್ಯಾ ಅವರು ಕತ್ರಿನಾ ಪರವಾಗಿ ಇನ್​​ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ಕತ್ರಿನಾ ಅವರನ್ನು ಬೆಂಬಲಿಸಿದ್ದಾರೆ.

    ಇನ್​​ಸ್ಟಾಗ್ರಾಂ ಪೋಸ್ಟ್

ಬಾಲಿವುಡ್ ನಟ ಅಲಿ ಫಜಲ್, ಹೃತಿಕ್ ರೋಷನ್ ಸೇರಿದಂತೆ ಇನ್ನೂ ಹಲವಾರು ಮಂದಿ ಕತ್ರಿನಾ ಕೈಫ್​​ ಅನ್ನು ಬೆಂಬಲಿಸಿದ್ದಾರೆ.

        ನಟ ಅಲಿ ಫಜಲ್