Pic credit - Instagram

Author: Rajesh Duggumane

15 Aug 2025

ಮೊದಲ ದಿನ ಟಾಪ್ ಓಪನಿಂಗ್ ಪಡೆದ ಆರು ಚಿತ್ರಗಳು 

ಪುಷ್ಪ 2

ಒಳ್ಳೆಯ ಓಪನಿಂಗ್ ಪಡೆದ ಸಿನಿಮಾಗಳ ಸಾಲಿನಲ್ಲಿ ‘ಪುಷ್ಪ 2‘ ಚಿತ್ರಕ್ಕೆ ಮೊದಲ ಸ್ಥಾನ ಇದೆ. ಈ ಸಿನಿಮಾ ಮೊದಲ ದಿನವೇ 257 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 

ಬಾಹುಬಲಿ 2 

‘ಬಾಹುಬಲಿ 2’ ಸಿನಿಮಾ ಮೊದಲ ದಿನ ವಿಶ್ವ ಮಟ್ಟದಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿತ್ತು. ಈ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. 

ಆರ್​ಆರ್​ಆರ್​ 

ವಿಶ್ವ ಮಟ್ಟದಲ್ಲಿ ಮೊದಲ ದಿನ 189 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಈ ಸಿನಿಮಾ ಮೂರನೇ ಸ್ಥಾನದಲ್ಲಿ ಇದೆ. 

ಕೆಜಿಎಫ್ 2

ಕನ್ನಡದ ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 161.2 ಕೋಟಿ ರೂಪಾಯಿ ಬಾಚಿಕೊಂಡು ನಾಲ್ಕನೇ ಸ್ಥಾನದಲ್ಲಿ ಇದೆ. 

ಐದನೇ ಸ್ಥಾನ 

ಐದನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಇದೆ ಅನ್ನೋದು ವಿಶೇಷ. ಈ ಸಿನಿಮಾದ ಮೊದಲ ಗಳಿಕೆ 160 ಕೋಟಿ ರೂಪಾಯಿ.

ಕೂಲಿ 

ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಯಿತು. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದಿದೆ. ಈ ಚಿತ್ರದ ಮೊದಲ ದಿನದ ಗಳಿಕೆ 150 ಕೋಟಿ ರೂಪಾಯಿ. 

ಮಿಶ್ರ ಪ್ರತಿಕ್ರಿಯೆ 

ಸದ್ಯ ರಜನಿಕಾಂತ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.