Pic credit - Instagram

Author: Rajesh Duggumane

05 Aug 2025

ಮಗು ಜನಿಸಿ ಕೆಲವೇ ದಿನಕ್ಕೆ ‘ವಾರ್ 2’ ಪ್ರಚಾರ ಆರಂಭಿಸಿದ ಕಿಯಾರಾ ಅಡ್ವಾಣಿ 

ಕಿಯಾರಾ 

ಕಿಯಾರಾ ಅಡ್ವಾಣಿ ಅವರು ಮಗು ಜನಿಸಿದ ಕೆಲವೇ ದಿನಗಳಲ್ಲಿ ‘ವಾರ್ 2’ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. 

10 ದಿನ 

‘ವಾರ್ 2’ ಸಿನಿಮಾ ರಿಲೀಸ್​ಗೆ ಇನ್ನು 10 ದಿನ ಮಾತ್ರ ಬಾಕಿ ಇದೆ. ಆಗಸ್ಟ್ 14ರಂದು ಚಿತ್ರ ತೆರೆಗೆ ಬರಲಿದೆ. 

ಹೃತಿಕ್ ರೋಷನ್ 

‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಹೀರೋ. ಈ ಚಿತ್ರಕ್ಕೆ ಜೂನಿಯರ್ ಎನ್​ಟಿಆರ್ ವಿಲನ್. 

ಕಿಯಾರಾ ನಟಿ 

‘ವಾರ್ 2’ ಸಿನಿಮಾಗೆ ನಟಿ ಕಿಯಾರಾ ಅಡ್ವಾಣಿ ಅವರು ನಾಯಕಿ. ಈ ಚಿತ್ರದ ಮೂಲಕ ಅವರು ಗಮನ ಸೆಳೆಯಲಿದ್ದಾರೆ. 

ಸೋಶಿಯಲ್ ಮೀಡಿಯಾ

ಕಿಯಾರಾ ಅಡ್ವಾಣಿ ಅವರು ಸೋಶಿಯಲ್ ಮೀಡಿಯಾ ಮೂಲಕ ಸಿನಿಮಾನ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. 

ವಿವಿಧ ಪೋಸ್ಟ್ 

ಕಿಯಾರಾ ಅವರು ವಿವಿಧ ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ. 

ಸುದ್ದಿಗೋಷ್ಠಿ 

ಕಿಯಾರಾ ಅವರು ಸುದ್ದಿಗೋಷ್ಠಿಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡೋದು ಅನುಮಾನ ಎನ್ನಲಾಗುತ್ತಿದೆ. 

ಕನ್ನಡದಲ್ಲಿ 

ಕಿಯಾರಾ ಅವರು ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.