14  Aug 2025

Pic credit - Pintrest

Author: Akshatha Vorkady

ದಾಸ ಮತ್ತೆ ಜೈಲಿಗೆ; ರೊಚ್ಚಿಗೆದ್ದ ದರ್ಶನ್​​ ಫ್ಯಾನ್ಸ್

ನಟ ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

ದರ್ಶನ್​​ ಮತ್ತೆ ಜೈಲಿಗೆ

ದಾಸ ಮತ್ತೆ ಜೈಲಿಗೆ ಸೇರುವುದು ಫಿಕ್ಸ್​​ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳಿಗೆ ಆಘಾತ ಉಂಟಾಗಿದ್ದು, ಫ್ಯಾನ್ಸ್​​ ರೊಚ್ಚಿಗೆದ್ದು ಬಿಟ್ಟಿದ್ದಾರೆ.

ಅಭಿಮಾನಿಗಳಿಗೆ ಆಘಾತ

ಜಾಮೀನು ರದ್ದಾಗುತ್ತಿದ್ದಂತೆ  ಸೋಶಿಯಲ್​​ ಮೀಡಿಯಾಗಳಲ್ಲಿ ದರ್ಶನ್​​ ಅಭಿಮಾನಿಗಳು ಕೋಲಾಹಲ ಸೃಷ್ಟಿಸಿದ್ದಾರೆ.

 ದರ್ಶನ್​​ ಅಭಿಮಾನಿಗಳು 

ನಟಿ ರಮ್ಯಾ ಅವರು ತಮಗೆ ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಮೆಸೇಜ್‌ ಕಳಿಸುತ್ತಿದ್ದಾರೆ ಎಂದು ಈಗಾಗಲೇ ಬೆಂಗಳೂರು ನಗರ ಆಯುಕ್ತರಿಗೆ ದೂರು ನೀಡಿದ್ದರು. 

ಅಶ್ಲೀಲ ಮೆಸೇಜ್‌

ಈ ನಡುವೆ ದರ್ಶನ್‌ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್‌ ಫ್ಯಾನ್ಸ್‌ ಪೇಜ್‌ ನಲ್ಲಿ ಹಾಕಿರುವ ಫೋಸ್ಟ್​​ ಒಂದು ವೈರಲ್​​ ಆಗಿದೆ.

ಫ್ಯಾನ್ಸ್‌ ಪೇಜ್‌

ಸದ್ಯದ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಇರುವುದು ಮುಖ್ಯ. ಈ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಮೆಟ್ಟಿಲಾಗಲಿ ಎಂದು ದಾಸ ಪೇಜ್​ನಲ್ಲಿ ಪೋಸ್ಟ್​ ಹಾಕಲಾಗಿದೆ. 

ಪೋಸ್ಟ್  ವೈರಲ್​

ದರ್ಶನ್ ಅವರು ಇಷ್ಟು ದಿನ ಹೊರಗೆ ಹಾಯಾಗಿ ಓಡಾಡಿಕೊಂಡಿದ್ದರು. ಆದರೆ, ಈಗ ತೊಂದರೆ ಎದುರಾಗಿದೆ. ಅವರು ಮತ್ತೆ ಜೈಲು ಸೇರ ಬೇಕಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

ಫ್ಯಾನ್ಸ್ ಬೇಸರ

ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11  ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.

ಪವಿತ್ರಾ ಗೌಡ