ಸಿನಿಮಾ ಇಲ್ಲದಿದ್ದರೂ ಕೋಟಿ-ಕೋಟಿ ದುಡಿಯುತ್ತಿರುವ ದೀಪಿಕಾ ಪಡುಕೋಣೆ

16 Apr 2025

By  Manjunatha

ದೀಪಿಕಾ ಪಡುಕೋಣೆ ತಾಯಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಚಿತ್ರರಂಗದಿಂದ ಸಣ್ಣ ಬಿಡುವು ತೆಗೆದುಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ

ತಾಯಿಯಾಗಿರುವ ದೀಪಿಕಾ ಪಡುಕೋಣೆ, ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಯಿಯಾಗಿರುವ ದೀಪಿಕಾ 

ಹಾಗೆಂದು ದೀಪಿಕಾ, ದುಡಿಮೆ ನಿಲ್ಲಿಸಿಲ್ಲ. ಸಿನಿಮಾಗಳು ಇಲ್ಲದಿದ್ದರೂ ಸಹ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

   ದುಡಿಮೆ ನಿಲ್ಲಿಸಿಲ್ಲ ನಟಿ

ದೀಪಿಕಾ ಪಡುಕೋಣೆ ತಮ್ಮ ಉದ್ಯಮದ ಮೇಲೆ ಹೆಚ್ಚಿನ ಗಮನ ವಹಿಸಿದ್ದಾರಂತೆ. ಜೊತೆಗೆ ಹೊಸ ಉದ್ಯಮಗಳಿಗೂ ಕೈ ಹಾಕಿದ್ದಾರೆ.

 ಉದ್ಯಮದ ಮೇಲೆ ಗಮನ

ದೀಪಿಕಾ ಪಡುಕೋಣೆ 82 ಡಿಗ್ರಿ ಹೆಸರಿನ ಕಾಸ್ಮೆಟಿಕ್ ಬ್ರ್ಯಾಂಡ್ ಹೊಂದಿದ್ದು ಅದರ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ.

82 ಡಿಗ್ರಿ  ಕಾಸ್ಮೆಟಿಕ್ ಸಂಸ್ಥೆ

ಇದರ ಜೊತೆಗೆ ಕೆಲವು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಸಹ ದೀಪಿಕಾ ಪಡುಕೋಣೆ ಮಾಡುತ್ತಿದ್ದಾರಂತೆ.

ರಿಯಲ್ ಎಸ್ಟೇಟ್ ಹೂಡಿಕೆ

ದೀಪಿಕಾ ಹಾಗೂ ರಣ್ವೀರ್ ಸಿಂಗ್ ಸೇರಿಕೊಂಡು ಹೊಸ ಮನೆ ನಿರ್ಮಾಣವನ್ನು ಸಹ ಮಾಡುತ್ತಿದ್ದು, ಅದರ ಮೇಲ್ವಿಚಾರಣೆ ಸಹ ನೋಡಿಕೊಳ್ಳುತ್ತಿದ್ದಾರೆ.

 ದೀಪಿಕಾ ಹಾಗೂ ರಣ್ವೀರ್ 

ಇದೆಲ್ಲದರ ಜೊತೆಗೆ ಕೆಲವು ಬ್ರ್ಯಾಂಡ್​ಗಳ ಜಾಹೀರಾತಿನಲ್ಲಿಯೂ ಸಹ ದೀಪಿಕಾ ಪಡುಕೋಣೆ ತೊಡಗಿಸಿಕೊಂಡಿದ್ದಾರೆ.

ಬ್ರ್ಯಾಂಡ್​ಗಳ ಜಾಹೀರಾತು