ಅಲ್ಲು ಅರ್ಜುನ್-ಅಟ್ಲಿ ಸಿನಿಮಾಕ್ಕೆ 100 ದಿನ ಮೀಸಲಿಟ್ಟ ದೀಪಿಕಾ ಪಡುಕೋಣೆ

20 AUG 2025

By  Manjunatha

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ತಾಯಿ ಆಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ

ತಾಯ್ತನದ ಬಳಿಕ ಚಿತ್ರರಂಗಕ್ಕೆ ಮರಳಿರುವ ದೀಪಿಕಾ ಪಡುಕೋಣೆ ಈಗ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಎರಡು ಸಿನಿಮಾಗಳಲ್ಲಿ

ಶಾರುಖ್ ಖಾನ್ ನಟಿಸಿ ನಿರ್ಮಾಣ ಮಾಡುತ್ತಿರುವ ‘ಕಿಂಗ್’ ಸಿನಿಮಾಕ್ಕೆ ಅವರೇ ನಾಯಕಿ.

  ಶಾರುಖ್ ಖಾನ್ ಸಿನಿಮಾ

ಅಲ್ಲು ಅರ್ಜುನ್ ನಟಿಸಿ, ಅಟ್ಲಿ ನಿರ್ದೇಶನ ಮಾಡುತ್ತಿರುವ ಹಾಲಿವುಡ್ ಮಾದರಿ ಸಿನಿಮಾಕ್ಕೂ ಅವರೇ ನಾಯಕಿ.

 ಹಾಲಿವುಡ್ ರೀತಿ ಸಿನಿಮಾ

ಅಲ್ಲು ಅರ್ಜುನ್ ಸಿನಿಮಾ ಭಾರಿ ಬಜೆಟ್​ ಸಿನಿಮಾ ಆಗಿದ್ದು, ಈ ಸಿನಿಮಾದ ಬಗ್ಗೆ ದೀಪಿಕಾಗೆ ಹೆಚ್ಚಿನ ನಿರೀಕ್ಷೆ ಇದೆ.

 ದೀಪಿಕಾಗೆ ಹೆಚ್ಚಿನ ನಿರೀಕ್ಷೆ

ಇದೇ ಕಾರಣಕ್ಕೆ ಅಲ್ಲು ಅರ್ಜುನ್-ಅಟ್ಲಿ ಸಿನಿಮಾದ ಚಿತ್ರೀಕರಣಕ್ಕೆ ಬರೋಬ್ಬರಿ 100 ದಿನ ಮೀಸಲಿಟ್ಟಿದ್ದಾರೆ.

       100 ದಿನ ಮೀಸಲು

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡುತ್ತಿರುವ ಕಾರಣ ಹೆಚ್ಚು ದಿನದ ಶೂಟಿಂಗ್ ನಡೆಯಲಿದೆ.

 ಅತ್ಯಾಧುನಿಕ ತಂತ್ರಜ್ಞಾನ

ದೀಪಿಕಾ ಪಡುಕೋಣೆ ದಿನಕ್ಕೆ ಎಂಟು ಗಂಟೆ ಮಾತ್ರವೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

     ದಿನಕ್ಕೆ ಎಂಟು ಗಂಟೆ